ಅಗ್ನಿಶಾಮಕ ಸೇವಾ ದಿನಾಚರಣೆ ಹಾಗೂ ಸಪ್ತಾಹದ ನಿಮಿತ್ತ ಕೊಟ್ಟೂರು ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ಕರಪತ್ರ ಹಂಚಿ ಜಾಗೃತಿ ಮೂಡಿಸಲಾಯಿತು. ಠಾಣಾಧಿಕಾರಿ ಬಸವರಾಜ್, ಪ್ರಮುಖರಾದ ಕೊಟ್ರಯ್ಯ, ವೀರಯ್ಯ ಇತರರಿದ್ದರು. 
ಬಳ್ಳಾರಿ

ಅಗ್ನಿ ಅನಾಹುತ-ರಕ್ಷಣೆ ಜಾಗೃತಿ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಅಗ್ನಿ ಅನಾಹುತ
  • ರಕ್ಷಣೆ ಜಾಗೃತಿ

ಅಗ್ನಿ ಅನಾಹುತ-ರಕ್ಷಣೆ ಜಾಗೃತಿ

ಕೊಟ್ಟೂರು: ಅಗ್ನಿಶಾಮಕ ಸೇವಾ ದಿನಾಚರಣೆ ಹಾಗೂ ಸಪ್ತಾಹದ ನಿಮಿತ್ತ ಅಗ್ನಿಶಾಮಕ ಠಾಣಾಧಿಕಾರಿ ಬಸವರಾಜ್ ನೇತೃತ್ವದಲ್ಲಿ ಗುರುವಾರ ಪಟ್ಟಣದ ಪೆಟ್ರೋಲ್ ಬಂಕ್, ಬಸ್ ನಿಲ್ದಾಣ ಹಾಗೂ ತಾಲೂಕಿನ ವಿವಿಧೆಡೆ ಕರಪತ್ರ ಹಂಚಿ ಅಗ್ನಿ ದುರಂತದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಅನಾಹುತ ಹಾಗೂ ರಕ್ಷಣೆ ಬಗ್ಗೆ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆ ನೀಡಲಾಯಿತು.