ಬಳ್ಳಾರಿ ತಾಲೂಕಿನ ಶ್ರೀಧರಗಡ್ಡೆ ಗ್ರಾಮದಲ್ಲಿ ಆಯೋಜಿಸಿದ್ದ ವಿಬಿ ಜಿ ರಾಮ್ ಜಿ ಕುರಿತು ಜಾಗೃತಿ ವಾಹನಗಳಿಗೆ ತಾಪಂ ಇಒ ಶ್ರೀಧರ್ ಬಾರಕೆರ್ ಚಾಲನೆ ನೀಡಿದರು. ಸಹಾಯಕ ನಿರ್ದೇಶಕ ಆರ್.ಕೆ ಬಸವರಾಜ್, ಪಿಡಿಒಗಳಾದ ಹನುಮಂತಪ್ಪ, ಪ್ರಕಾಶ ಅಮರಶೆಟ್ಟಿ, ತಾಲೂಕು ಸಂಯೋಜಕ ರಮೇಶ ಇತರರಿದ್ದರು. 
ಬಳ್ಳಾರಿ

ಕೂಲಿಕಾರರಿಗೆ ಆರ್ಥಿಕ ಭದ್ರತೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಜಲ ಮೂಲಗಳ ಪುನಶ್ಚೇತನ
ಬಳ್ಳಾರಿ : ಕೇಂದ್ರ ಸರ್ಕಾರ ವಿಬಿ ಜಿ ರಾಮ್ ಜಿ ಯೋಜನೆಯಡಿ ಗ್ರಾಮೀಣ ಕೂಲಿಕಾರರಿಗೆ ಆರ್ಥಿಕ ಭದ್ರತೆ ನೀಡಲು ಹಲವು ಸುಧಾರಣೆ ತಂದಿದೆ ಎಂದು ತಾಪಂ ಇಒ ಶ್ರೀಧರ್ ಬಾರಕೆರ್ ಹೇಳಿದರು.
ತಾಲೂಕಿನ ಶ್ರೀಧರಗಡ್ಡೆ ಹಾಗೂ ಕೊರ‌್ಲಗುಂದಿ ಗ್ರಾಮದಲ್ಲಿ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜಗಾರ್ ಮತ್ತು ಅಜೀವಿಕಾ ಮಿಷನ್ (ಗ್ರಾಮೀಣ) ಯೋಜನೆಯ ಕುರಿತು ಜಾಗೃತಿ ವಾಹನಗಳಿಗೆ ಚಾಲನೆ ನೀಡಿ ಮಾತನಾಡಿದರು. ಈ ಯೋಜನೆಯಡಿ ಕೂಲಿ ದರ 370 ರಿಂದ 382 ರೂ. ವರೆಗೆ ಹೆಚ್ಚಿಸಲಾಗಿದೆ. ಅಷ್ಟೇ ಅಲ್ಲದೆ, ಒಂದು ಕುಟುಂಬಕ್ಕೆ ಒಂದು ಆರ್ಥಿಕ ವರ್ಷದಲ್ಲಿ ನೀಡಲಾಗುತ್ತಿದ್ದ ಉದ್ಯೋಗದ ಅವಧಿ 125 ಮಾನವ ದಿನಗಳಿಗೆ ಹೆಚ್ಚಿಸಲಾಗಿದೆ ಎಂದರು.
ಈ ಯೋಜನೆಯಿಂದ ನೀರು ಸಂಗ್ರಹಣೆ ಮತ್ತು ಜಲ ಮೂಲಗಳ ಪುನಶ್ಚೇತನಕ್ಕೆ ಸಂಬಂಧಿಸಿದ ಕಾಮಗಾರಿಗಳಿಗೆ ವಿಶೇಷ ಉತ್ತೇಜನ ನೀಡುವುದು. ಗ್ರಾಮೀಣ ಜನರ ಜೀವನೋಪಾಯದ ಅವಕಾಶಗಳನ್ನು ಹೆಚ್ಚಿಸುವುದು. ಗ್ರಾಮೀಣ ಭಾಗದ ಮೂಲಭೂತ ಸೌಕರ್ಯಗಳು ಅಭಿವೃದ್ಧಿಪಡಿಸುವುದು ಮುಖ್ಯ ಉದ್ದೇಶವಾಗಿದೆ. ಒಟ್ಟು 318 ವೈವಿಧ್ಯಮಯ ಕಾಮಗಾರಿಗಳನ್ನು ನಿಗದಿಪಡಿಸಿದೆ. ರೈತರು ಹಾಗೂ ಸ್ವಸಹಾಯ ಸಂಘಗಳ ಮಹಿಳೆಯರಿಗೆ ಈ ಯೋಜನೆಯಲ್ಲಿ ಸುವರ್ಣಾವಕಾಶಗಳಿವೆ ಎಂದರು.