ವಿಧಾನ ಪರಿಷತ್ ಸದಸ್ಯ ವೈ.ಎಂ.ಸತೀಶ್  
ಬಳ್ಳಾರಿ

ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೇವೆಗಾಗಿ ವೈದ್ಯರ ಭರ್ತಿಗೊಳಿಸಿ

ಪ್ರಮುಖ ಮುಖ್ಯಾಂಶಗಳು

  • ಚಳಿಗಾಲ
  • ನಿವೃತ್ತಿ
  • ಒಳಮೀಸಲಾತಿ
ಬಳ್ಳಾರಿ : ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ಮಾತನಾಡಿ, ಬಿಮ್ಸ್‌ನಲ್ಲಿ 450 ತಜ್ಞ ವೈದ್ಯರ ಮಂಜೂರು ಪೈಕಿ 165 ಹುದ್ದೆಗಳು ಮಾತ್ರ ಭರ್ತಿಯಾಗಿವೆ. 1071 ಸಿಬ್ಬಂದಿ ಪೈಕಿ 213 ಮಾತ್ರ ನೇಮಕಗೊಂಡಿವೆ. ಮುಂದಿನ ಐದು ವರ್ಷಗಳಲ್ಲಿ 32 ವೈದ್ಯರು ಹಾಗೂ 31 ಇತರೆ ಸಿಬ್ಬಂದಿ ಸೇವಾ ನಿವೃತ್ತಿ ಹೊಂದಲಿದ್ದಾರೆ. ದಂತ ಕಾಲೇಜಿನಲ್ಲಿ 47 ವೈದ್ಯ ಹುದ್ದೆಗಳು ಮಂಜೂರಾಗಿದ್ದು, ಕೇವಲ 24 ಮಾತ್ರ ನೇಮಕಗೊಂಡಿವೆ. ಪೂರ್ಣ ಪ್ರಮಾಣದಲ್ಲಿ ಯಾವಾಗ ಭರ್ತಿಯಾಗಲಿವೆ ಎಂಬುದಾಗಿ ಪ್ರಶ್ನಿಸಿದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಆರ್. ಪಾಟೀಲ್ ಮಾತನಾಡಿ, ಬಿಮ್ಸ್‌ನಲ್ಲಿ ಎನ್‌ಎಂಸಿ ಹಾಗೂ ದಂತ ಕಾಲೇಜಿನಲ್ಲಿ ಡಿಸಿ (ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ) ಮೂಲಕ ಒಳಮೀಸಲಾತಿ ವಿವಾದ ಇತ್ಯರ್ಥಗೊಂಡ ನಂತರ ಹಂತ ಹಂತವಾಗಿ ಹುದ್ದೆಗಳು ಭರ್ತಿ ಮಾಡಲಾಗುವುದು ಎಂದು ಉತ್ತರಿಸಿದರು.