ಬಿ.ಶ್ರೀರಾಮುಲು 
ಬಳ್ಳಾರಿ

ರೆಡ್ಡಿ ಮೇಲೆ ಐವತ್ತು ಬುಲೆಟ್ ಸಿಡಿದಿವೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಅಂಗರಕ್ಷಕ
  • ಪ್ರಚೋದನೆ
  • ಪ್ರಕರಣ
ಬ್ಯಾನರ್ ಘರ್ಷಣೆಯಲ್ಲಿ ಖಾಸಗಿ ಅಂಗರಕ್ಷಕರ ಬಂದೂಕುಗಳಿಂದ ಶಾಸಕ ಜಿ.ಜನಾರ್ದನರೆಡ್ಡಿ ಮೇಲೆ ಐವತ್ತಕ್ಕೂ ಅಧಿಕ ಬುಲೆಟ್ ಹಾರಿವೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗಾಗಲೆ ಬಂಧಿಸಿರುವ ಖಾಸಗಿ ಅಂಗರಕ್ಷಕ, ಕೊಲೆ ಆರೋಪಿ ಗುರುಚರಣ್ ಸಿಂಗ್ ಯಾರಿಗೆ ಅಂಗರಕ್ಷಕನಾಗಿದ್ದು ಎಂಬುದು ಪೊಲೀಸರು ಖಚಿತಪಡಿಸಬೇಕು. ಘರ್ಷಣೆಗೆ ಪ್ರಚೋದನೆ ನೀಡಿದ ಪ್ರಮುಖ ಆರೋಪಿಯನ್ನು ಬಂಧಿಸಬೇಕು. ಇಲ್ಲದಿದ್ದರೆ ಬಳ್ಳಾರಿಯಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಮಾಡುವೆ. ಇದರ ಬಗ್ಗೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.
ಪ್ರಕರಣದಲ್ಲಿ ಸಾಕ್ಷೃ ನಾಶಪಡಿಸುವ ಸಲುವಾಗಿ ಗಲಾಟೆಯಲ್ಲಿ ಮೃತಪಟ್ಟ ಯುವಕನ ಮೃತದೇಹವನ್ನು ಆರಂಭದಲ್ಲಿ ಮರಣೋತ್ತರ ಪರೀಕ್ಷೆ ಒಳಪಡಿಸಲು ಕಾಂಗ್ರೆಸ್ ನಾಯಕರು ಅಡ್ಡಿಪಡಿಸಿದ್ದಾರೆ. ಆದರೆ, ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕವೇ ಮೃತದೇಹ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂಬುದಾಗಿ ಸೂಚಿಸಿದ್ದಾರೆ. ಇದರಿಂದ ಸಾಕ್ಷೃ ನಾಶ ಸಲುವಾಗಿಯೇ ದೇಹವನ್ನು ಮೂರು ಬಾರಿ ಮರಣೋತ್ತರ ಪರೀಕ್ಷೆ ಒಳಪಡಿಸಲಾಗಿದೆ ಎಂದು ಆರೋಪಿಸಿದರು. ಇದರ ಸಂಪೂರ್ಣ ದಾಖಲೆಗಳಿದ್ದು ಅಗತ್ಯವಿದ್ದರೆ ಬಹಿರಂಗಪಡಿಸುವೆ ಎಂದರು.