ಸಿರಿಗೇರಿಯಲ್ಲಿ ನಡೆದ ಕರಿ ಹರಿಯುವ ಸ್ಪರ್ಧೆಯಲ್ಲಿ ನೆನೆಕ್ಕಿ ಮೌಲಾಲಿ ಹಾಗೂ ದೊಡ್ಡಬಸಪ್ಪ ಅವರ ಎತ್ತುಗಳು ಪ್ರಥಮ ಸ್ಥಾನ ಪಡೆದವು. 
ಬಳ್ಳಾರಿ

ಕರಿ ಹರಿದ ಎತ್ತುಗಳು

ಅಶೋಕ್ ಕುಮಾರ್ ಎನ್
ಸಿರಿಗೇರಿ: ಮುದ್ದಟ್ನೂರು, ಶಾನವಾಸಪುರ, ದಾಸಪುರ, ಕೊಂಚಿಗೇರಿ, ಕರೂರು, ಉತ್ತನೂರು ಸೇರಿದಂತೆ ವಿವಿಧೆಡೆ ಕಾರ ಹುಣ್ಣಿಮೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಬೆಳಗಿನ ಜಾವದಿಂದಲೇ ರೈತರು ಗೊಂಡೆವು, ಹಣೆ, ಗೆಜ್ಜೆ ಜೂಲು, ಕೊರಳು ಗೆಜ್ಜೆಯೊಂದಿಗೆ ಎತ್ತುಗಳನ್ನು ಸಿಂಗರಿಸಿದರು. ಗ್ರಾಮದ ದೊಡ್ಡ ಅಗಸೆಯಲ್ಲಿ ಕರಿ ಹರಿಯುವ ಸ್ಪರ್ಧೆ ನಡೆಯಿತು. ನೆನೆಕ್ಕಿ ಮೌಲಾಲಿ, ದೊಡ್ಡಬಸಪ್ಪ ಅವರ ಎತ್ತುಗಳು ಪ್ರಥಮ ಸ್ಥಾನ, ಕೊಳ್ಳಿ ಈರಣ್ಣ ಅವರ ಎತ್ತುಗಳು ದ್ವಿತೀಯ ಸ್ಥಾನ ಪಡೆದವು. ಜಯಗಳಿಸಿದ ಎತ್ತುಗಳ ಮೆರವಣಿಗೆ ನಡೆಸಲಾಯಿತು.