ಹಗರಿಬೊಮ್ಮನಹಳ್ಳಿ ಸಿಐಟಿಯು ತಾಲೂಕು ಪದಾಧಿಕಾರಿಗಳು ಜೆಸ್ಕಾಂ ಇಇ ರಾಘವೇಂದ್ರ, ಎಇಇ ನಾಗರಾಜ ಕುರೆಕುಪ್ಪೆ ಅವರಿಗೆ ಮನವಿ ಸಲ್ಲಿಸಿದರು. ಸಿಐಟಿಯು ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ ತಾಲೂಕು ಸಂಚಾಲಕ ಎಸ್.ಜಗನ್ನಾಥ ಮತ್ತಿತರರು ಇದ್ದರು. 
ಬಳ್ಳಾರಿ

ವಿದ್ಯುತ್ ಖಾಸಗೀಕರಣದಿಂದ ರೈತರಿಗೆ ತೊಂದರೆ

ಪ್ರಮುಖ ಮುಖ್ಯಾಂಶಗಳು

  • ಜೆಸ್ಕಾಂ
  • ಅಧಿಕಾರಿಗಳಿಗೆ
  • ಮನವಿ
ಹಗರಿಬೊಮ್ಮನಹಳ್ಳಿ: ವಿದ್ಯುತ್ ಖಾಸಗೀರಣಕ್ಕಾಗಿ ಟಾಟಾ ಕಂಪನಿ ಸಲ್ಲಿಸಿರುವ ಅರ್ಜಿಯನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ತಿರಸ್ಕರಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ತಾಲೂಕು ಘಟಕದಿಂದ ಜೆಸ್ಕಾಂ ಇಲಾಖೆ ಇಇ ರಾಘವೇಂದ್ರ, ಎಇಇ ನಾಗರಾಜ ಕುರೆಕುಪ್ಪೆ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.
ಸಿಐಟಿಯು ತಾಲೂಕು ಸಂಚಾಲಕ ಎಸ್.ಜಗನ್ನಾಥ ಮಾತನಾಡಿ, ದೇಶದಲ್ಲಿ ಹೆಚ್ಚು ಕೃಷಿ ಹವಾಮಾನ ವೈವಿಧ್ಯಕ್ಕೆ ಹೆಸರಾಗಿರುವ ಕರ್ನಾಟಕ ಸುಮಾರು 40ಲಕ್ಷಕ್ಕೂ ಹೆಚ್ಚು ಕೃಷಿ ನೀರಾವರಿ ಪಂಪ್ ಸೆಟ್‌ಗಳನ್ನು ಆಶ್ರಯಿಸಿ, ರೈತರು ಕೃಷಿ ನಡೆಸುತ್ತಿದ್ದಾರೆ. ವಿದ್ಯುತ್ ಖಾಸಗೀಕರಣವಾದರೆ ಪ್ರಮುಖವಾಗಿ ರೈತರಿಗೆ ತೊಂದರೆಯಾಗುತ್ತೆ ಎಂದರು.
ರಾಜ್ಯ ಉಪಾಧ್ಯಕ್ಷ ಆರ್.ಎಸ್.ಬಸವರಾಜ ಮಾತನಾಡಿ, ಖಾಸಗೀಕರಣದಿಂದ ರೈತರು ವ್ಯವ್ಯಸಾಯದಿಂದ ದೂರ ಉಳಿಯುವಂತಹ ಪರಿಸ್ಥಿತಿ ಬಂದೊದಗಿದೆ. ಇದರಿಂದ ರಾಜ್ಯದ ಹಾಗೂ ದೇಶದ ಆಹಾರ ಭದ್ರತೆಗೆ ತೀವ್ರ ತೊಂದರೆ ಉಂಟಾಗುತ್ತದೆ. ಅಲ್ಲದೆ, ರಾಜ್ಯದ ಎಲ್ಲ ನಾಗರಿಕರು ಕಟ್ಟುವ ತೆರಿಗೆ ಹಣದಲ್ಲಿ ಕಟ್ಟಲಾದ ಸಾರ್ವಜನಿಕ ರಂಗದ ಆಸ್ತಿಯು ಲಕ್ಷಾಂತರ ಕೋಟಿ ರೂ.ಗಳನ್ನು ಖಾಸಗಿ ಕಂಪನಿಗೆ ಕೊಡುವ ಹುನ್ನಾರವಾಗಿದೆ ಎಂದರು.
ರೈತ ಸಂಘದ ಆನಂದ್, ಜೆಸ್ಕಾಂ ಇಲಾಖೆ ಸಿಬ್ಬಂದಿ ಚಂದ್ರಮ್ಮ, ರಾಮು, ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ರಾಘವೇಂದ್ರ, ಸದಸ್ಯರಾದ ತಿಮ್ಮಣ್ಣ, ವಿಶ್ವನಾಥ್, ಕೊಟ್ರೇಶ ಮತ್ತಿತರರು ಇದ್ದರು.
.