ಹಗರಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಳೆ ವಿಮೆ ಹಾಗೂ ಪರ್ಯಾಯ ಬೆಳೆ ಪದ್ಧತಿಗಳ ಬಗ್ಗೆ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ ನಡೆಯಿತು. ಉಪ ಕೃಷಿ ನಿರ್ದೇಶಕ ಎಸ್.ಎನ್.ಮಂಜುನಾಥ, ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ , ವಿಜ್ಞಾ ನಿಗಳಾದ ಡಾ.ಎಸ್.ರವಿ, ಡಾ. ಕೃಷ್ಣಮೂರ್ತಿ, ಡಾ. ಪಾಲಯ್ಯ, ಡಾ. ನವೀನ್ ಇತರರಿದ್ದರು. 
ಬಳ್ಳಾರಿ

ರೈತರು ವಿಮೆ ಸದುಪಯೋಗಿಸಿಕೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ವಿಮೆ ಮಾಡಿಸುವುದು ಸೂಕ್ತ
ಬಳ್ಳಾರಿ : ಪಹಣಿ ಹೊಂದಿರುವ ಪ್ರತಿಯೊಬ್ಬ ರೈತರು ಬೆಳೆ ವಿಮೆ ಅರ್ಹರಾಗಿದ್ದು, ಸದುಪಯೋಗಪಡಿಸಿಕೊಳ್ಳಬೇಕು ಎಂದು ಉಪ ಕೃಷಿ ನಿರ್ದೇಶಕ ಎಸ್.ಎನ್.ಮಂಜುನಾಥ ಹೇಳಿದರು. ತಾಲೂಕಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾಲೂಕು ಆಡಳಿತ, ಕೃಷಿ ಇಲಾಖೆ ಸಹಯೋಗದೊಂದಿಗೆ ಪಿಎಂಎಫ್‌ಬಿವೈ ಬೆಳೆ ವಿಮೆ, ಪರ್ಯಾಯ ಬೆಳೆ ಪದ್ಧತಿ ಹಾಗೂ ಬರಗಾಲ ನಿರ್ವಹಣಾ ಕ್ರಮಗಳು ಕುರಿತು ಆಯೋಜಿಸಿದ್ದ ರೈತರಿಗೆ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸದ್ಯದಲ್ಲಿ ಪರಿಸ್ಥಿತಿಯಲ್ಲಿ ರೈತರು ಬಿತ್ತನೆಗೆ ಮುಂಚಿತವಾಗಿಯೇ ವಿಮೆ ಮಾಡಿಸುವುದು ಸೂಕ್ತ. ಜಿಲ್ಲೆಯ ಭಾಗದ ರೈತರು ಹತ್ತಿ, ಮೆಕ್ಕೆಜೋಳ, ಸಜ್ಜೆ ಹಾಗೂ ಬರ ನಿರೋಧಕ ಬೆಳೆಯಾದ ನವಣೆ ಮತ್ತು ಸಾಮೆಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕೆಂದು ಕರೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಗರ್ಜಪ್ಪ ಮಾತನಾಡಿ, ಇನ್ನೂ ಬಿತ್ತನೆಯಾಗದ ಪ್ರದೇಶಗಳಲ್ಲಿ ವಿಬಿ ಜಿ-ರಾಮ್-ಜಿ ಮತ್ತು ಕೃಷಿ ಭಾಗ್ಯ ಯೋಜನೆಯಡಿ ಕಂದಕ ಬದು ಹಾಗೂ ಕೃಷಿ ಹೊಂಡಗಳು ನಿರ್ಮಿಸಿಕೊಳ್ಳಬೇಕು. ಪ್ರಸಕ್ತ ಸಾಲಿನಲ್ಲಿ ಮಳೆ ಕೊರತೆಯಿರುವುದರಿಂದ ಪರ್ಯಾಯ ಬೆಳೆ ಬೆಳೆದು ರೈತರು ಲಾಭ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಣ್ಣು ವಿಜ್ಞಾನಿ ಡಾ.ಎಸ್.ರವಿ ಮಾತನಾಡಿ, ರೈತರು ಜಮೀನನ್ನು ಸಮತಟ್ಟು ಮಾಡದೆ ಉಳುಮೆ ಮಾಡಿ ಹಾಗೆಯೇ ಬಿಡುವುದರಿಂದ ಮಳೆಯಾದಾಗ ನೀರು ಮಣ್ಣಿನಲ್ಲಿ ಇಂಗಲು ನೆರವಾಗುತ್ತದೆ. ಆಗಸ್ಟ್ ಕೊನೆಯಲ್ಲಿ ಮಳೆಯಾದರೂ ಗೋಧಿ, ನವಣೆ, ರಾಗಿ ಬೆಳೆಯಬಹುದು. ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರಗಳನ್ನು ಬೆಳೆಸಬೇಕು ಎಂದು ವಿವರಿಸಿದರು.
===