ಎನ್.ಭರಮಣ್ಣ 
ಬಳ್ಳಾರಿ

ರೈತರಿಗೆ ಪಾವತಿಯಾಗದ ಹಣ

ಪ್ರಮುಖ ಮುಖ್ಯಾಂಶಗಳು

  • ಪೂರ್ಣಪ್ರಮಾಣ
  • ಹಣ
  • ಜಮಾ
ಕೊಟ್ಟೂರು: ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಿ ಎರಡು ತಿಂಗಳು ಕಳೆದಿದ್ದರೂ ಈವರೆಗೆ ರೈತರ ಖಾತೆಗೆ ಸರ್ಕಾರ ಪೂರ್ಣಪ್ರಮಾಣದಲ್ಲಿ ಹಣ ಜಮಾಮಾಡಿಲ್ಲ. ಇದರಿಂದಾಗಿ ರೈತರು ಆರ್ಥಿಕ ಸಂಕಷ್ಟ್ಟಕ್ಕೀಡಾಗುವಂತೆ ಆಗಿದೆ.
ಕ್ವಿಂಟಾಲ್ ೪,೮೮೬ ರಂತೆ ರಾಜ್ಯ ಸರ್ಕಾರ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಏಜೆನ್ಸಿ ಮೂಲಕ ರಾಗಿ ಖರೀದಿಸಿದೆ. ಉಜ್ಜಯಿನಿಯಲ್ಲಿ ೨೪,೨೪೭ ಕ್ವಿಂಟಾಲ್, ಕೊಟ್ಟೂರಿನಲ್ಲಿ ೭೧ ಸಾವಿರ ಕ್ವಿಂಟಾಲ್ ಖರೀದಿಸಲಾಗಿದೆ.

ತಾಲೂಕಿನ ಎರಡು ಕೇಂದ್ರದಿಂದ ಒಟ್ಟು ೪೯ ಕೋಟಿ ರೂ. ಪಾವತಿಸಬೇಕಿದ್ದು, ಕೊಟ್ಟೂರು ಕೇಂದ್ರಕ್ಕೆ ೪.೮೮ ಕೋಟಿ ರೂ., ಉಜ್ಜಯಿನಿ ಕೇಂದ್ರಕ್ಕೆ ೧.೩೮ ಕೋಟಿ ರೂ. ಜಮಾ ಆಗಿದೆ. ೪೩ ಕೋಟಿ ರೂ. ರೈತರ ಖಾತೆಗೆ ಜಮಾ ಆಗಬೇಕಿದೆ.
"

ಮಕ್ಕಳ ಶಾಲೆ-ಕಾಲೇಜು ಆರಂಭವಾಗಲಿದ್ದು, ಶುಲ್ಕ ಕಟ್ಟಲು ರೈತರಿಗೆ ತೊಂದರೆಯಾಗಲಿದೆ. ಇದರಿಂದಾಗಿ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಿರುವ ಸರ್ಕಾರ ಬಾಕಿ ಹಣವನ್ನು ಶೀಘ್ರ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕು.

— ಎನ್.ಭರಮಣ್ಣ ರಾಜ್ಯ ರೈತ ಸಂಘದ ಉಪಾಧ್ಯಕ್ಷ, ಕೊಟ್ಟೂರು


"

ಬೆಂಬಲ ಬೆಲೆ ಯೋಜನೆಯಡಿ ರಾಗಿ ಮಾರಾಟ ಮಾಡಿ ಎರಡು ತಿಂಗಳಾಗಿದೆ. ಈವರೆಗೂ ಹಣ ಜಮಾ ಆಗಿಲ್ಲ. ಮಗಳ ಮದುವೆಗಾಗಿ ಪರಿಚಯಸ್ಥರ ಬಳಿ ಹಣ ಪಡೆದಿದ್ದು, ವಾಪಸ್ ನೀಡುವಂತೆ ದುಂಬಾಲು ಬಿದ್ದಿದ್ದಾರೆ.

— ಕೊಟ್ರೇಶ ರೈತ, ಕೊಟ್ಟೂರು