ಉಜ್ಜಿನಿ ಸಮೀಪದ ಗಾಣಗಟ್ಟೆ ಗ್ರಾಮದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗ್ರಾಮ ಘಟಕ ಉದ್ಘಾಟಿಸಲಾಯಿತು. ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ, ಗ್ರಾಮ ಘಟಕದ ಅಧ್ಯಕ್ಷ ಎಂ.ರವಿ, ಕೊಟ್ಟೂರು ತಾಲೂಕು ಅಧ್ಯಕ್ಷ ಮಹಾಂತೇಶ್, ವಿಜಯನಗರ ಜಿಲ್ಲಾಧ್ಯಕ್ಷ ಬಣಕಾರ್ ಬಸವರಾಜಪ್ಪ, ಬಳ್ಳಾರಿ ಜಿಲ್ಲಾಧ್ಯಕ್ಷ ಡಿ.ದೇವೇಂದ್ರಪ್ಪ ಇತರರಿದ್ದರು. 
ಬಳ್ಳಾರಿ

ಬೆಂಬಲ ಬೆಲೆ ಸಿಗದೆ ರೈತರಿಗೆ ಸಂಕಷ್ಟ

ಪ್ರಮುಖ ಮುಖ್ಯಾಂಶಗಳು

  • ಬೆಂಬಲ ಬೆಲೆ

ಬೆಂಬಲ ಬೆಲೆ ಸಿಗದೆ ರೈತರಿಗೆ ಸಂಕಷ್ಟ

ಉಜ್ಜಿನಿ: ಹಳ್ಳಿಗಳಲ್ಲಿ ಕುಡಿವ ನೀರು, ರಸ್ತೆ, ಚರಂಡಿ, ರೈತರ ಕೊಳವೆಬಾವಿಗಳಿಗೆ ಸಮರ್ಪಕ ವಿದ್ಯುತ್ ಸಂಪರ್ಕದಿಂದ ವಂಚಿತರಾಗಿದ್ದೇವೆ ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ ಹೇಳಿದರು.
ಗಾಣಗಟ್ಟೆ ಗ್ರಾಮದಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಗ್ರಾಮ ಘಟಕ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಬೆಳೆಗೆ ಬೆಂಬಲ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾರುಕಟ್ಟೆಯಲ್ಲಿ ವರ್ತಕರು ಹಾಗೂ ದಲ್ಲಾಳಿಗಳ ಮೋಸದಿಂದ ರೈತರು ಸಾಲಗಾರನಾಗುತ್ತಿದ್ದಾರೆ.
ಬಹುರಾಷ್ಟ್ರೀಯ ವಿದೇಶಿ ಕಂಪನಿಗಳು ರೈತರ ಬೀಜ ಉತ್ಪಾದನೆ ಹಕ್ಕನ್ನು ಕಿತ್ತುಕೊಂಡು ಅವರಿಂದಲೇ ಉತ್ಪಾದಿಸಿದ ಬೀಜಗಳನ್ನು ಮಾರಾಟ ಮಾಡಿ ಹಗಲು ದರೋಡೆ ಮಾಡುತ್ತಿದ್ದಾರೆ. ಇದನ್ನು ಎದುರಿಸಲು ಪ್ರತಿ ಹಳ್ಳಿಗಳಲ್ಲಿ ಸಂಘಟನೆಯಿಂದ ಹೋರಾಟ ನಡೆಸಬೇಕು ಎಂದರು.
ಗ್ರಾಮ ಘಟಕದ ಅಧ್ಯಕ್ಷ ಎಂ.ರವಿ, ಕೊಟ್ಟೂರು ತಾಲೂಕು ಅಧ್ಯಕ್ಷ ಮಹಾಂತೇಶ್, ಜಿಲ್ಲಾಧ್ಯಕ್ಷ ಬಣಕಾರ್ ಬಸವರಾಜಪ್ಪ, ಬಳ್ಳಾರಿ ಜಿಲ್ಲಾಧ್ಯಕ್ಷ ಡಿ.ದೇವೇಂದ್ರಪ್ಪ, ಪ್ರಮುಖರಾದ ಶಾಂತನಹಳ್ಳಿ ಚಂದ್ರಯ್ಯಸ್ವಾಮಿ, ಮಾರಪ್ಪ, ಎ.ಎಂ.ಜಗದೀಶ್, ಬಸವರಾಜ, ಮಾರೇಶ, ಮಹಾಂತೇಶ ಇತರರಿದ್ದರು.