ಸಿರಿಗೇರಿಯಲ್ಲಿ ರೈತರು ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಚರಗ ಚೆಲ್ಲಿದರು.  
ಬಳ್ಳಾರಿ

ಹೊಲದಲ್ಲಿ ಕುಟುಂಬ ಸಮೇತ ಊಟ

ಸಿರಿಗೇರಿ: ಎಳ್ಳಮಾವಾಸ್ಯೆ ಹಿನ್ನೆಲೆಯಲ್ಲಿ ಶುಕ್ರವಾರ ಗ್ರಾಮೀಣ ಪ್ರದೇಶದಲ್ಲಿ ವಿಶೇಷ ಸಂಭ್ರಮ ಕಂಡುಬಂತು.
ಮನೆಯಲ್ಲಿ ಪೂಜೆ ಸಲ್ಲಿಸಿ ಹಸಿಟ್ಟು ಉಂಡೆ, ಅಲಸಂದಿಕಾಳು ನೈವೇದ್ಯದೊಂದಿಗೆ ರೈತರು ಬೆಳಗಿನ ಜಾವ ಹೊಲಗಳಿಗೆ ತೆರಳಿದರು. ಹೊಲದಲ್ಲಿ ಭೂಮಿತಾಯಿಗೆ ನಮಸ್ಕರಿಸಿ ಪಾಂಡವರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ನಂತರ ಹೊಲದ ಸುತ್ತ ಹುಲಿಗಾ ಹುಲಿಗಾ, ಸಲಾಪುಲಿಗಾ ಎಂದು ಭಕ್ತಿ ಸಮರ್ಪಿಸಿದರು. ದವಸ, ಧಾನ್ಯ ಚೆನ್ನಾಗಿ ಬೆಳೆಯಲಿ ಎಂದು ಭೂದೇವಿ ಹಾಗೂ ಸೂರ್ಯದೇವನಿಗೆ ಪ್ರಾರ್ಥಿಸಿದರು. ಬಳಿಕ ಹೊಲದಲ್ಲಿ ಕುಟುಂಬ ಸಮೇತ ಊಟ ಮಾಡಿದರು.