ಬಳ್ಳಾರಿಯ ಮಹಾನಗರ ಪಾಲಿಕೆಯ ಆಯುಕ್ತ ಪಿ.ಎಸ್.ಮಂಜುನಾಥ ಅವರ ಭಾವಚಿತ್ರ ಬಳಸಿಕೊಂಡು ನಕಲಿ ಮೊಬೈಲ್ ಸಂಖ್ಯೆಯ ಮೂಲಕ ವಾಟ್ಸ್‌ಪ್ ರಚನೆ ಮಾಡಿ ಸಂದೇಶ ಕಳುಹಿಸಿರುವುದು. 
ಬಳ್ಳಾರಿ

ಭಾವಚಿತ್ರ ಬಳಸಿ ನಕಲಿ ವಾಟ್ಸ್‌ಪ್ ಆರಂಭ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಭಾವಚಿತ್ರ
ಬಳ್ಳಾರಿ : ಇಲ್ಲಿನ ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಅವರ ಭಾವಚಿತ್ರ ಬಳಸಿಕೊಂಡು ಅಪರಿಚಿತ ವ್ಯಕ್ತಿಗಳು ನಕಲಿ ಮೊಬೈಲ್ ಸಂಖ್ಯೆಯ ಮೂಲಕ ವಾಟ್ಸಾಪ್ ಖಾತೆ ತೆರೆದಿರುವ ಸೋಮವಾರ ಘಟನೆ ನಡೆದಿದೆ.
ಈ ಖಾತೆಯ ಮೂಲಕ ಸಾರ್ವಜನಿಕರಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ವಾಟ್ಸ್‌ಪ್ ಮೂಲಕ ಸಂದೇಶ ರವಾನಿಸಿ, ಹಣ ಕಬಳಿಸಲು ಅಥವಾ ದುರುದ್ದೇಶಪೂರಿತ ಚಟುವಟಿಕೆಗಳಿಗೆ ಕಿಡಿಗೇಡಿಗಳು ಸಂಚು ರೂಪಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾಹಿತಿ ತಿಳಿದ ಕೂಡಲೇ ಎಚ್ಚೆತ್ತಿರುವ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಅವರು ಕಿಡಿಗೇಡಿಗಳು ನನ್ನ ಭಾವಚಿತ್ರ ಬಳಸಿ ನಕಲಿ ವಾಟ್ಸಾಪ್ ಖಾತೆ ಸೃಷ್ಟಿಸಿದ್ದಾರೆ. ಅದು ನನ್ನ ಅಧಿಕೃತ ಮೊಬೈಲ್ ಸಂಖ್ಯೆಯಲ್ಲ. ಈ ನಕಲಿ ಸಂಖ್ಯೆಯಿಂದ ಬರುವ ಯಾವುದೇ ಸಂದೇಶಗಳಿಗೆ ಸಾರ್ವಜನಿಕರು ಹಾಗೂ ಪಾಲಿಕೆ ಸಿಬ್ಬಂದಿ ಸ್ಪಂದಿಸಬಾರದು. ಮುಖ್ಯವಾಗಿ ಹಣದ ಬೇಡಿಕೆ ಅಥವಾ ಇನ್ಯಾವುದೇ ವೈಯಕ್ತಿಕ ಮಾಹಿತಿ ಕೇಳಿದರೆ ಯಾವುದೇ ಕಾರಣಕ್ಕೂ ನೀಡಬಾರದು ಎಂಬುದಾಗಿ ಮನವಿ ಮಾಡಿದ್ದಾರೆ. ಈ ನಕಲಿ ಖಾತೆ ಸೃಷ್ಟಿಸಿರುವ ಕಿಡಿಗೇಡಿಗಳ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಮೂಲಗಳು ತಿಳಿಸಿದವು.
===