ಸಿಪಿಐ ಕಾರ್ಯಕರ್ತರು ಹಮ್ಮಿಕೊಂಡಿದ್ದ ಕಾಲ್ನಡಿಗೆ ಪ್ರತಿಭಟನೆ ಹಾಗೂ ಜಾಥಾದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ಸಂತೋಷ್, ತಾಲೂಕು ಕಾರ್ಯದರ್ಶಿ ರಮೇಶ್ ನಾಯ್ಕ, ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್, ಸಂಗೀತ ಕಲಾವಿದರಾದ ಸಲಾಂ ಸಾಬ್, ಕೆ. ಈಶ್ವರಪ್ಪ, ಪಕ್ಷದ ಪ್ರಮುಖರಾದ ಶಿವರಾಮ್, ಚನ್ನವೀರ ಸ್ವಾಮಿ, ಚಮನ್ ಸಾಬ್, ಶರಣಪ್ಪ, ದ್ವಾರಕೀಶ್, ಕರಿಬಸವರಾಜ ಇತರರಿದ್ದರು. 
ಬಳ್ಳಾರಿ

ಶೋಷಣೆ ವಿರುದ್ಧ ಧ್ವನಿಯೆತ್ತಿ ಬದಲಾವಣೆ ತನ್ನಿ

ಕುರುವತ್ತಿ ಶ್ರೀಕಾಂತಪ್ಪ

ಹರಪನಹಳ್ಳಿ:

ರೈತರು, ಕಾರ್ಮಿಕರು ಹಾಗೂ ದೀನದಲಿತರ ಮೇಲೆ ನಿರಂತರವಾಗಿ ನಡೆಯುತ್ತಿರುವ ಶೋಷಣೆಯ ವಿರುದ್ಧ ಎಲ್ಲರೂ ಧ್ವನಿಯತ್ತುವ ಮೂಲಕ ಬದಲಾವಣೆ ಬಯಸಬೇಕು ಎಂದು ಸಿಪಿಐ ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ಸಂತೋಷ್ ಹೇಳಿದರು.

ಹೊಸಕೋಟೆ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ವಿವಿಧ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಪಕ್ಷದ ಕಾರ್ಯಕರ್ತರು ಹಮ್ಮಿಕೊಂಡಿದ್ದ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಂಡು ಮಾತನಾಡಿದರು. ಆ.6ರಿಂದ ದೇಶಾದ್ಯಂತ ‘ಬದಲಾವಣೆ’ ಘೋಷಣೆಯ ಅಡಿಯಲ್ಲಿ ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದ್ದು, ಸಮಾಜದಲ್ಲಿನ ಶೋಷಣೆಯ ವಿರುದ್ಧ ಹೋರಾಡಲು ಪಕ್ಷ ಸಜ್ಜಾಗಿದೆ ಎಂದರು.
ಪಕ್ಷದ ತಾಲೂಕು ಕಾರ್ಯದರ್ಶಿ ರಮೇಶ್ ನಾಯ್ಕ ಮಾತನಾಡಿ, ದುಡಿಯುವ ಕೈಗಳಿಗೆ ಕಾಯಕ ನೀಡುವ ಮೂಲಕ ಬಡವರ ಕಣ್ಣೊರೆಸುತ್ತಿದ್ದ ಖಾತ್ರಿ ಯೋಜನೆಯನ್ನು ಕೇಂದ್ರ ಸರ್ಕಾರವು ಕೇವಲ ಒಂದು ಸಾಧಾರಣ ಸ್ಕೀಮ್ ರೀತಿಯಲ್ಲಿ ಬದಲಾಯಿಸಿ, ಯೋಜನೆಯ ಮೂಲ ಸ್ವರೂಪವನ್ನೇ ಹತ್ತಿಕ್ಕಲು ಹುನ್ನಾರ ನಡೆಸಿದೆ ಎಂದರು. ಕಿಸಾನ್ ಸಭಾದ ಜಿಲ್ಲಾಧ್ಯಕ್ಷ ಗುಡಿಹಳ್ಳಿ ಹಾಲೇಶ್ ಮಾತನಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಾಪಂ ಇಒ ವೈ.ಎಚ್. ಚಂದ್ರಶೇಖರ್, ಹೊಸಕೋಟೆ ಗ್ರಾಪಂ ವ್ಯಾಪ್ತಿಯಲ್ಲಿ 487 ವಸತಿಹೀನರ ಮನವಿಗಳು ಸ್ವೀಕೃತಗೊಂಡಿದ್ದು, ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದರು. ಕೆರೆ ಗುಡಿಹಳ್ಳಿ ಗ್ರಾಮದಲ್ಲಿ ಜಾಥಾ ಆರಂಭಗೊಂಡು, ಚಿಕ್ಕ ಕಬ್ಬಳ್ಳಿ ಮೂಲಕ ಹೊಸಕೋಟೆ ಗ್ರಾಪಂ ಕಚೇರಿ ತಲುಪಿತು.