ದೇವಲಾಪುರ ಹೊಸನಗರ ಸಹಿಪ್ರಾ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮವನ್ನು ಬಡ್ತಿ ಮುಖ್ಯಶಿಕ್ಷಕಿ ಚನ್ನಬಸಮ್ಮ ಶೆಟ್ರು ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಬಾವಿಕಟ್ಟೆ ಹೊನ್ನೂರಸ್ವಾಮಿ, ಉಪಾಧ್ಯಕ್ಷೆ ಮಹಾಂಕಾಳೆಮ್ಮ ವೆಂಕಟೇಶ, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಉಮೇಶಗೌಡ ಇತರರಿದ್ದರು.
ಭಾರತೀಯ ಹಬ್ಬಗಳ ವೈಜ್ಞಾನಿಕ ಹಿನ್ನಲೆ ತಿಳಿಸಿ
ಕಂಪ್ಲಿ: ಮೊಬೈಲ್, ದೂರದರ್ಶನ ಮೊದಲಾದ ಸಾಮಾಜಿಕ ಮಾಧ್ಯಮಗಳಿಂದ ಪ್ರೇರಿತರಾದ ಮಕ್ಕಳು ಪಾಶ್ಚತ್ಯ ಜೀವನಶೈಲಿಯತ್ತ ವಾಲುತಿದ್ದಾರೆ ಎಂದು ಬಡ್ತಿ ಮುಖ್ಯಶಿಕ್ಷಕಿ ಚನ್ನಬಸಮ್ಮ ಶೆಟ್ರು ಹೇಳಿದರು.
ದೇವಲಾಪುರ ಹೊಸನಗರ ಸಹಿಪ್ರಾ ಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ, ಸಂಕ್ರಾಂತಿ ಹಬ್ಬದ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಲ್ಯದಲ್ಲಿಯೇ ಮಕ್ಕಳಿಗೆ ಭಾರತೀಯ ಹಬ್ಬಗಳ ವೈಜ್ಞಾನಿಕ ಹಿನ್ನಲೆ, ಔಚಿತ್ಯ ತಿಳಿಸುವಲ್ಲಿ ಪಾಲಕರು ಹಾಗೂ ಶಿಕ್ಷಕರು ಜಾಗೃತಿ ವಹಿಸಬೇಕು ಎಂದರು.
ನಂತರ ಪಾಲಕರು ತಮ್ಮ ಮಕ್ಕಳಿಗೆ ಸಮವಸ್ತ್ರ ವಿತರಿಸಿದರು. 7ನೇ ತರಗತಿ ವಿದ್ಯಾರ್ಥಿಗಳು ತಂದೆತಾಯಿ ಪಾದ ಪೂಜೆ ಮಾಡಿದರು. ಕ್ವಿಜ್, ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ಬಾವಿಕಟ್ಟೆ ಹೊನ್ನೂರಸ್ವಾಮಿ, ಉಪಾಧ್ಯಕ್ಷೆ ಮಹಾಂಕಾಳೆಮ್ಮ ವೆಂಕಟೇಶ, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಉಮೇಶಗೌಡ, ಪ್ರಮುಖರಾದ ಚನ್ನಕೇಶವ, ಕೆ.ಶಿವಕುಮಾರ್, ದೇವರಮನೆ ಪಂಪಾಪತಿ, ಪೂಜಾರಿ ರಮೇಶ್ ಇತರರಿದ್ದರು.