ಕಂಪ್ಲಿಯಲ್ಲಿ ಶರಣ ಸಾಹಿತ್ಯ ಪರಿಷತ್ತಿನ 189ನೇ ಮಹಾಮನೆ ಕಾರ್ಯಕ್ರಮವನ್ನು ಅಕ್ಕಿಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಉದ್ಘಾಟಿಸಿದರು. 
ಬಳ್ಳಾರಿ

ಶರಣರ ತತ್ವಗಳಿಂದ ಸಮಾಜದಲ್ಲಿ ಸಮಾನತೆ

ಕಂಪ್ಲಿ: ಯಾವುದೇ ಕೆಲಸವನ್ನು ನಿಷ್ಠೆಯಿಂದ ಮಾಡಿದಲ್ಲಿ ದೇಶ ಪ್ರಗತಿಹೊಂದಲು ಸಾಧ್ಯ ಎಂದು ಷಾ.ಮಿಯಾಚಂದ್ ಸರ್ಕಾರಿ ಹೈಸ್ಕೂಲ್ ಶಿಕ್ಷಕ ಡಾ.ಬಿ.ಸುನಿಲ್ ಹೇಳಿದರು.
ಪಟ್ಟಣದ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಕಚೇರಿ ಆವರಣದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತಿನಿಂದ ಬುಧವಾರ ಹಮ್ಮಿಕೊಂಡಿದ್ದ 189ನೇ ಮಹಾಮನೆ ಕಾರ್ಯಕ್ರಮದಲ್ಲಿ ‘ಶರಣರ ಕಾಯಕ ತತ್ವ ಚಿಂತನೆ’ ಕುರಿತು ಉಪನ್ಯಾಸ ನೀಡಿದರು. ಕಾಯಕದಿಂದ ಗಳಿಸಿದ ಆದಾಯವನ್ನು ದಾಸೋಹಕ್ಕೆ ಬಳಸಬೇಕು ಎಂದರು.
ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಂ.ಎಸ್.ಗಂಗಾಧರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶರಣರ ತತ್ವ, ವಿಚಾರಧಾರೆಗಳು ಸಮಾಜದಲ್ಲಿ ಸಮಾನತೆ, ಜಾತೀಯತೆ ಹಾಗೂ ಸಹೋದರತ್ವ ಭಾವ ಮೂಡಿಸುತ್ತವೆ ಎಂದರು.
ಅಕ್ಕಿಗಿರಣಿ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ಹೇಮಯ್ಯಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಪೆಕ್ಸ್ ಬ್ಯಾಂಕ್ ಸದಸ್ಯ ಪಿ.ಮೂಕಯ್ಯಸ್ವಾಮಿ, ಶರಣ ಚಿಂತಕ ಡಾ.ಬಿ.ಸುನಿಲ್ ಅವರನ್ನು ಗೌರವಿಸಲಾಯಿತು.
ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪ್ರಮುಖರಾದ ಕೆ.ಚಂದ್ರಶೇಖರ್, ವಿ.ನಾರಾಯಣರೆಡ್ಡಿ, ಚಂದ್ರಯ್ಯಸೊಪ್ಪಿಮಠ, ಸಜ್ಜೇದ ವೀರಭದ್ರಪ್ಪ, ಎಂ.ಮಲ್ಲಯ್ಯ, ಎಸ್.ಶಾಮಸುಂದರರಾವ್, ಸೋಗಿ ಸಂತೋಷ್, ಬೆಟ್ಟಪ್ಪ ಬಾರ್ಕೀರ, ವಿ.ಪಕ್ಕೀರಪ್ಪ, ಎಸ್.ಜೆ.ಎಂ.ಚನ್ನಬಸಯ್ಯ, ಎ.ಗುರುಮೂರ್ತಿ, ಫಣಿ ಸೋಮಪ್ಪ ಇತರರಿದ್ದರು.