ಕಂಪ್ಲಿಯಲ್ಲಿ ಜೈನ ಸಮುದಾಯದಿಂದ ನಡೆದ ವಿಶ್ವ ನವಕರ ಮಹಾಮಂತ್ರ ದಿನದ ನಿಮಿತ್ತ ಜೈನರು ಸಾಮೂಹಿಕ ನವಕರ ಮಹಾಮಂತ್ರ ಜಪಿಸಿದರು. ಪ್ರಮುಖರಾದ ಜವೇರಿಲಾಲ್ ಬಾಗ್ರೇಚಾ, ಶಾಂತಿಲಾಲ್ ಬಾಲಾರ್, ಶಾಂತಿಲಾಲ್ ಸಿಂಘ್ವಿ, ಫತೇಕುಮಾರ್ ಭಾಫ್ಣ, ಪಾರಸ್‌ಮಲ್ ಹುಂಡಿಯಾ ಇತರರಿದ್ದರು.
ನವಕರ ಮಂತ್ರ ಜಪದಿಂದ ಜೀವನೋತ್ಸಾಹ
ಕಂಪ್ಲಿ: ಆತ್ಮ ಮತ್ತು ಲೋಕ ಕಲ್ಯಾಣಕ್ಕಾಗಿ ನವಕರ ಮಹಾಮಂತ್ರ ಜಪಿಸಲಾಗಿದೆ ಎಂದು ಜೈನ ಸಮಾಜದ ಅಧ್ಯಕ್ಷ ಜವೇರಿಲಾಲ್ ಬಾಗ್ರೇಚಾ ಹೇಳಿದರು.
ಪಟ್ಟಣದ ಶ್ರೀ ಮುನಿ ಸುವ್ರತ್‌ಸ್ವಾಮಿ ಹುಂಡಿಯಾ ಛತ್ರದಲ್ಲಿ ಜೈನ್ ಇಂಟರ್‌ನ್ಯಾನಷನಲ್ ಟ್ರೇಡ್ ಆರ್ಗನೈಜೇಷನ್(ಜೆಐಟಿಒ) ಹಾಗೂ ಕಂಪ್ಲಿ ಜೈನ ಸಮಾಜದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ನವಕರ ಮಹಾಮಂತ್ರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನವಕರ ಮಹಾಮಂತ್ರ ಜಪಿಸುವುದರಿಂದ ಆಧ್ಯಾತ್ಮಿಕ, ಆತ್ಮಸಂಸ್ಕಾರ, ಜೀವನೋತ್ಸಾಹದ ಜತೆ ಸಾಮರಸ್ಯ ಮೂಡುತ್ತದೆ. ಜಲ, ಮಣ್ಣು, ಪರಿಸರ ಸಂರಕ್ಷಣೆ ಮತ್ತು ಪೋಷಣೆ, ವೈಯಕ್ತಿಕ ಮತ್ತು ಸಮುದಾಯಿಕ ಸ್ವಚ್ಛತೆ, ದೇಶೀಯ ವಸ್ತುಗಳ ಬಳಕೆಗೆ ಪ್ರೋತ್ಸಾಹ, ರಾಸಾಯನಿಕ ಮುಕ್ತ ಕೃಷಿ, ಆಹಾರ ಉತ್ಪಾದನೆಗೆ ಉತ್ತಮ ವಾತಾವರಣ ರೂಪಿಸುವುದು, ಸಂಯಮದ ಜೀವನ, ಆರೋಗ್ಯ ರಕ್ಷಣೆಗೆ ಯೋಗ, ಧ್ಯಾನ ಅಭ್ಯಾಸ, ಆರ್ಥಿಕವಾಗಿ ಹಿಂದುಳಿದವರಿಗೆ ಸಹಾಯ ಮಾಡುವ ಸಂಕಲ್ಪವನ್ನು ನವಕರ ಮಹಾಮಂತ್ರ ಜಪದ ಉದ್ದೇಶವಾಗಿದೆ ಎಂದರು.
ಪ್ರಮುಖರಾದ ಶಾಂತಿಲಾಲ್ ಬಾಲಾರ್, ಶಾಂತಿಲಾಲ್ ಸಿಂಘ್ವಿ, ಫತೇಕುಮಾರ್ ಭಾಫ್ಣ, ಪಾರಸ್‌ಮಲ್ ಹುಂಡಿಯಾ ಇತರರಿದ್ದರು.