ಬಳ್ಳಾರಿಯ ರಾಘವ ಕಲಾಮಂದಿರದಲ್ಲಿ ನಡೆದ ಕಾಕರ್ಲತೋಟ ಕನುಗೋಲು ತಿಮ್ಮಪ್ಪ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ರಾಘವ ಮೆಮೊರೀಯಲ್ ಅಸೋಸಿಯೇಷನ್ ಸಂಸ್ಥೆಯ ಗೌರವಾಧ್ಯಕ್ಷ ಕೆ.ಚನ್ನಪ್ಪ ಉದ್ಘಾಟಿಸಿದರು. ಪದಾಧಿಕಾರಿಗಳಾದ ಎಚ್.ವಿಷ್ಣುವರ್ಧನ್‌ರೆಡ್ಡಿ, ರಮಣಪ್ಪ ಭಜಂತ್ರಿ , ರಮೇಶ್‌ಗೌಡ, ಪಿ.ಧನಂಜಯ, ಪಿ.ಎಂ.ನಟರಾಜ್, ಕೆ.ರಾಮಾಂಜನೇಯಲು, ಅನಿಲಬಾಬು, ವಿ.ರಾಮಚಂದ್ರ, ರಮಣಪ್ಪ ಭಜಂತ್ರಿ ಇತರರಿದ್ದರು.
- ಜನ ಸೇವೆ ಜತೆಗೆ ಕಲೆಗೆ ಪ್ರೋತ್ಸಾಹಿಸಿ
- ನಾಟಕಗಳ ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡಿ
ಬಳ್ಳಾರಿ : ಕಾಕರ್ಲತೋಟ ಕನುಗೋಲು ತಿಮ್ಮಪ್ಪ ಅವರು ಜನ ಸೇವೆ ಜತೆಗೆ ಕಲೆಗೆ ಪ್ರೋತ್ಸಾಹಿಸಿದರು ಎಂದು ರಾಘವ ಮೆಮೊರೀಯಲ್ ಅಸೋಸಿಯೇಷನ್ ಸದಸ್ಯ ಎನ್.ಬಸವರಾಜ್ ಹೇಳಿದರು. ನಗರದ ರಾಘವ ಕಲಾಮಂದಿರದಲ್ಲಿ ಆಯೋಜಿಸಿದ್ದ ಕಾಕರ್ಲತೋಟ ಕನುಗೋಲು ತಿಮ್ಮಪ್ಪ ಅವರ 26ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಕನ್ನಡ ಹಾಗೂ ತೆಲುಗು ನಾಟಕಗಳ ಪ್ರದರ್ಶನಕ್ಕೆ ಹೆಚ್ಚು ಒತ್ತು ನೀಡಿದ್ದರು. ಸದಾ ಸನ್ಮಾರ್ಗದಲ್ಲಿ ನಡೆದು ಇತರರಿಗೂ ಮಾರ್ಗದರ್ಶಕರಾಗಿ ಬಾಳಿದರು ಎಂದು ಸ್ಮರಿಸಿದರು. ಬಳಿಕ ಕಾರ್ಯಕ್ರಮದಲ್ಲಿ ಚೆರುಕೂರಿ ಸಾಂಬಶಿವರಾವು ಅವರ ರಚನೆಯ ಶ್ರೀಲಾಲ್ ರೆಡ್ಡಿ ನಿರ್ದೇಶನದಲ್ಲಿ ರಂಗ ಸಂಸ್ಕೃತಿ ವತಿಯಿಂದ ತೆಲುಗಿನ ಅಂತಿಮ ತೀರ್ಪು ಎಂಬ ಸಾಮಾಜಿಕ ನಾಟಕ ಪ್ರದರ್ಶಿಸಲಾಯಿತು.