ಚಿಕ್ಕಜೋಗಿಹಳ್ಳಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ನಮ್ಮ ನಡೆ, ಶಾಲೆ ಕಡೆ ಪರಿಕಲ್ಪನೆಯ ಮರಳಿ ಬಾ ಜಾಗೃತಿ ನಾಟಕವನ್ನು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ವೀಕ್ಷಿಸಿದರು. ತಾಪಂ ಇಒ ನರಸಪ್ಪ, ಬಿಇಒ ಮೈಲೇಶ್ ಬೇವೂರ್, ಕುರಿಹಟ್ಟಿ ಬೋಸಣ್ಣ, ಶಿವನಾಯಕ ದೊರೆ, ಬಣವಿಕಲ್ಲು ಎರ‌್ರಿಸ್ವಾಮಿ ಇದ್ದರು.
- ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಅನಿಸಿಕೆ
- ಜಾಗೃತಿ ನಾಟಕ ಪ್ರದರ್ಶನ ಕಾರ್ಯಕ್ರಮ
ಕಾನಹೊಸಹಳ್ಳಿ: ಸಂಸ್ಕಾರಯುತ ಶಿಕ್ಷಣವೇ ಸದೃಢ ರಾಷ್ಟ್ರದ ಭದ್ರ ಅಡಿಪಾಯ. ಶಿಕ್ಷಣ ಕೇವಲ ಅಕ್ಷರಜ್ಞಾನವಲ್ಲ, ವ್ಯಕ್ತಿತ್ವ ರೂಪಿಸುವ ಶಕ್ತಿ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಹೇಳಿದರು.
ಚಿಕ್ಕಜೋಗಿಹಳ್ಳಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಗಜಾಪುರದ ಗಂಗಾ ಪರಮೇಶ್ವರಿ ಗ್ರಾಮೀಣ ಮತ್ತು ಕಲ್ಯಾಣಾಭಿವೃದ್ಧಿ ಸಂಸ್ಥೆಯಿಂದ ಬುಧವಾರ ಆಯೋಜಿಸಿದ್ದ ನಮ್ಮ ನಡೆ, ಶಾಲೆ ಕಡೆ ಪರಿಕಲ್ಪನೆಯ ’ಮರಳಿ ಬಾ’ ಜಾಗೃತಿ ನಾಟಕ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು. ಶಿಕ್ಷಣದಿಂದ ಮನುಷ್ಯನು ಸಂಸ್ಕಾರವಂತನಾಗುತ್ತಾನೆ.
ಕೆಟ್ಟ ಆಲೋಚನೆಗಳು, ದುಶ್ಚಟಗಳಿಂದ ದೂರವಿದ್ದು, ಸನ್ಮಾರ್ಗದಲ್ಲಿ ಮುನ್ನಡೆಸುವ ಶಕ್ತಿ ಶಿಕ್ಷಣಕ್ಕಿದೆ. ಆದ್ದರಿಂದ ಪ್ರತಿಯೊಂದು ಮಗು ಶಾಲೆಗೆ ಬರಬೇಕು. ಶಿಕ್ಷಣದಿಂದ ಯಾರೂ ವಂಚಿತರಾಗಬಾರದು. ಶಿಕ್ಷಣ ಕ್ಷೇತ್ರದ ಪ್ರಗತಿಗೆ ಹೆಚ್ಚಿನ ಮಹತ್ವ ನೀಡಿದ್ದು, ಕ್ಷೇತ್ರಾದ್ಯಂತ ಸರ್ಕಾರಿ ಶಾಲೆಗಳಿಗೆ ಕೊಠಡಿಗಳ ನಿರ್ಮಾಣ ಸೇರಿ ಮೂಲಸೌಕರ್ಯಗಳನ್ನು ಒದಗಿಸಲು ಒತ್ತು ನೀಡಲಾಗಿದೆ ಎಂದರು.
ತಾಪಂ ಇಒ ನರಸಪ್ಪ, ಬಿಇ ಮೈಲೇಶ್ ಬೇವೂರ್, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಣ್ಣ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ವೆಂಕಟೇಶ್, ಬಿಸಿಎಂ ತಾಲೂಕು ಕಲ್ಯಾಣಾಧಿಕಾರಿ ಶ್ಯಾಮಪ್ಪ, ನಾಟಕ ಅಕಾಡೆಮಿ ಸದಸ್ಯ ಶಿವನಾಯಕ ದೊರೆ, ಎಸ್ಡಿಎಂಸಿ ಅಧ್ಯಕ್ಷ ಪಿಎಸ್ ಧನಂಜಯ್, ಗಂಗಾಪರಮೇಶ್ವರಿ ಸಂಸ್ಥೆ ಕಾರ್ಯದರ್ಶಿ ಹಾಗೂ ಲೇಖಕ ಭೀಮಣ್ಣ ಗಜಾಪುರ, ಮುಖ್ಯಶಿಕ್ಷಕರಾದ ಸಕಲೇಶ್ವರ, ಗೋವಿಂದಪ್ಪ, ಸರ್ಕಾರಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್, ಕಲಾವಿದರ ಮಾಸಾಶನ ಮಂಜೂರಾತಿ ಸಮಿತಿ ಮಾಜಿ ಸದಸ್ಯ ಡಿ.ಒ.ಮುರಾರ್ಜಿ, ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ವೇದಿಕೆ ರಾಜ್ಯ ಉಪಾಧ್ಯಕ್ಷ ಗುನ್ನಳ್ಳಿ ರಾಘವೇಂದ್ರ, ಕರವೇ ತಾಲೂಕು ಅಧ್ಯಕ್ಷ ಕಾಟೇರ್ ಹಾಲೇಶ್ ಇತರರಿದ್ದರು.