ಸಿರಗುಪ್ಪದಲ್ಲಿ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮ ದಿನ ಕಾರ್ಯಕ್ರಮವನ್ನು ಶಾಸಕ ಬಿ.ಎಂ.ನಾಗರಾಜ ಉದ್ಘಾಟಿಸಿದರು. ಬಿಇಒ ಗುರಪ್ಪ, ಸಾವಿತ್ರಿಬಾಯಿ ಫುಲೆ ಸಂಘದ ತಾಲೂಕು ಅಧ್ಯಕ್ಷೆ ಎಸ್.ಛಾಯಾದೇವಿ, ಪ್ರಧಾನ ಕಾರ್ಯದರ್ಶಿ ಬಸಮ್ಮ ಚಕ್ರಸಾಲಿ, ಉಪಾಧ್ಯಕ್ಷೆ ಅನಿತಾ, ಸಂಘಟನಾ ಕಾರ್ಯದರ್ಶಿ ಟಿ.ರಾಧಿಕಾ ಇತರರಿದ್ದರು. 
ಬಳ್ಳಾರಿ

ಛಲ ಬಿಡದೇ ಹೆಣ್ಣುಮಕ್ಕಳಿಗೆ ಶಿಕ್ಷಣ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಸಾವಿತ್ರಿಬಾಯಿ ಫುಲೆ
  • ಮಹಿಳಾ ಸಬಲೀಕರಣ

ಛಲ ಬಿಡದೇ ಹೆಣ್ಣುಮಕ್ಕಳಿಗೆ ಶಿಕ್ಷಣ

ಸಿರಗುಪ್ಪ: ಮಹಿಳಾ ಸಬಲೀಕರಣಕ್ಕೆ ಅಡಿಪಾಯ ಹಾಕಿ ಜಾತಿ, ಲಿಂಗ ಅಸಮಾನತೆ, ಬಾಲ್ಯವಿವಾಹ, ಸತಿಪದ್ಧತಿ ಸೇರಿ ಮುಂತಾದ ಸಾಮಾಜಿಕ ಪಿಡುಗುಗಳ ವಿರುದ್ಧ ಹೋರಾಡಿ, ಸಮಾನತೆ ಮತ್ತು ಶಿಕ್ಷಣದ ಹಕ್ಕಿಗಾಗಿ ಜೀವನ ಮುಡಿಪಾಗಿಟ್ಟ ಕ್ರಾಂತಿಕಾರಿ ನಾಯಕಿ ಸಾವಿತ್ರಿಬಾಯಿ ಫುಲೆ ಎಂದು ಶಾಸಕ ಬಿ.ಎಂ.ನಾಗರಾಜ ಹೇಳಿದರು.
ಪಟ್ಟಣದ ಗುರುಭವನ ಸಭಾಂಗಣದಲ್ಲಿ ತಾಲೂಕು ಸಾವಿತ್ರಿಬಾಯಿ ಫುಲೆ ಸಂಘದಿಂದ ಶನಿವಾರ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಹಾಗೂ ಶೈಕ್ಷಣಿಕ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾವಿತ್ರಿಬಾಯಿ ಫುಲೆ ಅವರು ಬಾಲ್ಯ ವಿವಾಹವಾಗಿದ್ದರೂ ಪತಿ ಜ್ಯೋತಿಬಾಫುಲೆ ಅವರಿಂದ ಅಕ್ಷರ ಕಲಿತು ದಲಿತ ಮತ್ತು ಶೋಷಿತ ಸಮುದಾಯದ ಬಾಲಕಿಯರಿಗೆ ಶಾಲೆ ಆರಂಭಿಸಿದ್ದರು. ಅವಮಾನ ಅನುಭವಿಸಿದರೂ ಛಲ ಬಿಡದೇ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿದ್ದಾರೆ ಎಂದರು.
ಸಂಪನ್ಮೂಲ ವ್ಯಕ್ತಿ ಲಕ್ಷ್ಮೀ ಮಾತನಾಡಿ, ಸಮಾನತೆಗಾಗಿ ಕಷ್ಟಗಳನ್ನು ಮೆಟ್ಟಿನಿಂತ ಸಮಾಜ ಸುಧಾರಕರ ವಿಚಾರಗಳನ್ನು ತಿಳಿಯಲು ಶಿಕ್ಷಣ ಅಗತ್ಯ. ಸಾವಿತ್ರಿಬಾಯಿ ಫುಲೆ ಹಿಂದುಳಿದ ಹೆಣ್ಣುಮಕ್ಕಳಿಗೆ ಅಕ್ಷರ ಕಲಿಸುತ್ತಾರೆಂದು ಅವರ ಮೇಲೆ ಸೆಗಣಿ ಎರಚಲಾಗುತ್ತಿತ್ತು. ಶಾಲೆಯನ್ನು ತಲುಪಿ ಸಗಣಿ ಎರಚಿದ ಸೀರೆ ಬಿಟ್ಟು, ಮತ್ತೊಂದು ಸೀರೆಯುಟ್ಟು ಪಾಠ ಮಾಡುತ್ತಿದ್ದರು ಎಂದು ತಿಳಿಸಿದರು.
ಬಿಇಒ ಗುರಪ್ಪ, ಕೊಡ್ಲೆ ಮಲ್ಲಿಕಾರ್ಜುನ, ದಮ್ಮೂರು ಸೋಮಪ್ಪ, ವಾಲ್ಮೀಕಿ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಂ.ಸತೀಶ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕರಿಬಸಪ್ಪ, ಕ.ರಾ.ಸ.ನೌ ಸಂಘದ ತಾಲೂಕು ಕಾರ್ಯದರ್ಶಿ ಕೆ.ಎಂ.ಚಂದ್ರಕಾಂತ್, ಕ.ರಾ.ಪ್ರಾ.ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಹನುಮನಗೌಡ, ದೈಹಿಕ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ರಮೇಶ, ಕ.ರಾ.ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ರಾಜ್ಯ ಕೋಶ ಅಧ್ಯಕ್ಷೆ ದೊಡ್ಡಬಸಮ್ಮ, ಸಾವಿತ್ರಿಬಾಯಿ ಫುಲೆ ಸಂಘದ ತಾಲೂಕು ಅಧ್ಯಕ್ಷೆ ಎಸ್.ಛಾಯಾದೇವಿ ಇತರರಿದ್ದರು.