ಇಡಿ ಅಧಿಕಾರಿಗಳು ದಾಳಿ 
ಬಳ್ಳಾರಿ

ಇಡಿ ಅಧಿಕಾರಿಗಳು ದಾಳಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿ
  • ನಿರ್ದೇಶನಾಲಯ
  • ಪ್ರಕರಣ
ಬಳ್ಳಾರಿ : ಬೆಂಗಳೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಾರುತಿ ನಗರದ ವ್ಯಕ್ತಿಯೊಬ್ಬರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ)ಅಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ.
ದಾಳಿಗೆ ಒಳಗಾದ ವ್ಯಕ್ತಿಯ ಹಿನ್ನೆಲೆ ಏನು, ಯಾವ ವ್ಯಕ್ತಿ ಅಥವಾ ಉದ್ದಿಮೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಖಚಿತ ಮಾಹಿತಿ ಈವರೆಗೆ ದೊರೆತಿಲ್ಲ. ಇಡಿ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಮಾಹಿತಿ ಕೂಡ ನೀಡಿಲ್ಲ. ಭದ್ರತೆಗೆ ನೆರವೂ ಕೋರಿಲ್ಲ. ಆದರೆ, ಬೆಂಗಳೂರಿನ ಪ್ರಕರಣ ಸಂಬಂಧ ದಾಳಿ ನಡೆದಿದೆ ಎನ್ನಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದವು.
===