ಹಗರಿಬೊಮ್ಮನಹಳ್ಳಿಯಲ್ಲಿ ಪ್ರಕೃತಿ ಚಿಕಿತ್ಸಾ ಶಿಬಿರವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಜಂಟಿ ಕಾರ್ಯದರ್ಶಿ ಸೋಮನಗೌಡ್ರು ಉದ್ಘಾಟಿಸಿದರು. ಪ್ರಮುಖರಾದ ಉದಯಶಂಕರ ಭಟ್, ಪತ್ರಕರ್ತ ಪಂಚಾಕ್ಷರಿ, ಪತಂಜಲಿ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಪೂರ್ಣಿಮಾ ಇದ್ದರು. 
ಬಳ್ಳಾರಿ

ಭಾರತೀಯ ಆಹಾರ ಸೇವಿಸಿ

ಹಗರಿಬೊಮ್ಮನಹಳ್ಳಿ: ಆಹಾರವನ್ನು ಔಷಧವನ್ನಾಗಿ ಮತ್ತು ಯೋಗ ಸಾಧನೆ ರೂಢಿಸಿಕೊಂಡವರಿಗೆ ರೋಗದ ಭಯವಿಲ್ಲ ಎಂದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಜಂಟಿ ಕಾರ್ಯದರ್ಶಿ ಸೋಮನಗೌಡ್ರು ಅಭಿಪ್ರಾಯಪಟ್ಟರು.
ಪಟ್ಟಣದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಜನನಿ ಯೋಗ-ಪ್ರಕೃತಿ ಚಿಕಿತ್ಸಾ ಸಂಶೋಧನಾ ಕೇಂದ್ರ, ಪತಂಜಲಿ ಯೋಗ ಸಮಿತಿ ಮತ್ತು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆಶ್ರಯದಲ್ಲಿ ಭಾನುವಾರ ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಫಾಸ್ಟ್ ಫುಡ್ ಸಂಸ್ಕೃತಿಯಿಂದ ರೋಗಗಳು ಬರುತ್ತವೆ. ಭಾರತೀಯ ಆಹಾರ ಪದ್ಧತಿಯೊಂದೇ ಆರೋಗ್ಯಕ್ಕೆ ಏಕೈಕ ಪರಿಹಾರ ಎಂದರು.
ಮುಖ್ಯ ವೈದ್ಯಾಧಿಕಾರಿ ಡಾ. ರಾಜೇಶ್ ಪಾದೇಕಲ್, ಸಂಸ್ಥೆಯ ಸಾರ್ವಜನಿಕ ಸಂಪರ್ಕ ಮತ್ತು ಮಾಧ್ಯಮ ಮುಖ್ಯಸ್ಥ ಉದಯಶಂಕರ ಭಟ್, ಪತ್ರಕರ್ತ ಪಂಚಾಕ್ಷರಿ, ಪತಂಜಲಿ ಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಪೂರ್ಣಿಮಾ ಮಾತನಾಡಿದರು. ಪತಂಜಲಿ ಯೋಗ ಶಿಕ್ಷಣ ಸಮಿತಿ ಅಧ್ಯಕ್ಷೆ ವೇದಾವತಿ ಉಪ್ಪಿನ, ಪುರಸಭೆ ಸದಸ್ಯರಾದ ಕಮಲಮ್ಮ, ರಾಜೇಶ್ ಬ್ಯಾಡಗಿ, ಪ್ರಮುಖರಾದ ಶಂಭುಲಿಂಗ, ವ್ಯವಸ್ಥಾಪಕ ಅನೀಶ್ ಮತ್ತಿತರರು ಉಪಸ್ಥಿತರಿದ್ದರು.