ಜಮೀರ್ ಅಹ್ಮದ್ ಖಾನ್ 
ಬಳ್ಳಾರಿ

ಸಮರ್ಪಕವಾಗಿ ಕುಡಿವ ನೀರು ಪೊರೈಸಿ

ಪ್ರಮುಖ ಮುಖ್ಯಾಂಶಗಳು

  • ಸಮರ್ಪಕ
ಬಳ್ಳಾರಿ : ಬೇಸಿಗೆ ಹಿನ್ನೆಲೆ ಜಿಲ್ಲೆಯಲ್ಲಿ ಕುಡಿವ ನೀರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಸೂಚಿಸಿದ್ದಾರೆ.
ಜಿಲ್ಲೆಯ ಜಿಲ್ಲಾಧಿಕಾರಿ ಕೆ.ನಾಗೇಂದ್ರ ಪ್ರಸಾದ್, ಜಿಪಂ ಸಿಇಒ ಮಹಮ್ಮದ್ ಹ್ಯಾರಿಸ್ ಸುಮೈರ್ ಅವರೊಂದಿಗೆ ಗುರುವಾರ ದೂರವಾಣಿ ಕರೆ ಮೂಲಕ ಮಾತನಾಡಿದರು. ಕುಡಿವ ನೀರು ಪೊರೈಕೆ ಸಂಬಂಧ ನಿರಂತರ ಸಭೆ ನಡೆಸಿ ಸ್ಥಳೀಯ ಶಾಸಕರ ಜತೆ ಸಮನ್ವಯ ಸಾಧಿಸಬೇಕು. ಜಿಲ್ಲೆಯ ಯಾವ ತಾಲೂಕಿನಲ್ಲಾದರೂ ನೀರಿನ ಕೊರತೆಯಿದ್ದರೆ ತಕ್ಷಣ ಪರ್ಯಾಯ ಕ್ರಮ ಕೈಗೊಳ್ಳಬೇಕು. ಅಗತ್ಯಯಿರುವ ಕಡೆ ಬೋರ್‌ವೆಲ್ ಕೊರೆಸಬೇಕು ಎಂದರು.
ಡಿಸಿ ಕೆ. ನಾಗೇಂದ್ರ ಪ್ರಸಾದ್ ಮಾತನಾಡಿ, ಈಗಾಗಲೇ ಕುಡಿವ ನೀರು ಕೊರತೆಯಾಗದಂತೆ ಅಗತ್ಯವಿರುವ ಗ್ರಾಮಗಳಲ್ಲಿ 100 ಖಾಸಗಿ ಬೋರೆವೆಲ್ ವಶಕ್ಕೆ ಪಡೆಯಲು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.