ಕೊಟ್ಟೂರಿನಲ್ಲಿ ಕರ್ನಾಟಕ ರಾಜ್ಯ ಚಾಲಕರ ಒಕ್ಕೂಟದ ಕಾರು ಚಾಲಕರ ಸಭೆ ನಡೆಯುತು. ಅಧ್ಯಕ್ಷ ಗಿರೀಶ್, ಪ್ರಮುಖರಾದ ಎಂ.ತಿಪ್ಪೇಸ್ವಾಮಿ, ರಾಜಣ ಶೆಟ್ಟಿ, ಕೊಟ್ರೇಶ, ಎಂ.ವಿರೂಪಾಕ್ಷಿ ಇತರರಿದ್ದರು.
- ಚಾಲಕರ ಸಂಘದ ತಾಲೂಕು ಅಧ್ಯಕ್ಷ ಡಿ.ಗಿರೀಶ್ ಎಚ್ಚರಿಕೆ
- ಕಾರು ಚಾಲಕ ಸಭೆ
ಕೊಟ್ಟೂರು: ರಾಜ್ಯ ಚಾಲಕರ ಒಕ್ಕೂಟ ಕೊಟ್ಟೂರು ಕಾರು ಚಾಲಕರ ಘಟಕ ಉತ್ತಮ ಸೇವೆ ಮೂಲಕ ಗ್ರಾಹಕರ ನಂಬಿಕೆಗೆ ಅರ್ಹವಾಗಿದೆ ಎಂದು ಚಾಲಕರ ಸಂಘದ ತಾಲೂಕು ಅಧ್ಯಕ್ಷ ಡಿ.ಗಿರೀಶ್ ಹೇಳಿದರು.
ಮಂಗಳವಾರ ತಾಲೂಕು ಕಾರು ಚಾಲಕ ಸಭೆಯಲ್ಲಿ ಮಾತನಾಡಿದರು. ನಂಬಿಕೆ ಅರ್ಹವಾಗಿರುವ ಸಂಘವನ್ನು ಇಬ್ಬಾಗ ಮಾಡುವ ದುರುದ್ದೇಶದಿಂದ ಹಾಗೂ ಸ್ವಾರ್ಥಕ್ಕೆ ಅನ್ಯ ಊರಿನ ವ್ಯಕ್ತಿಗಳು ಇಲ್ಲಿ ಬೇರೆ ಸಂಘ ಸ್ಥಾಪನೆಗೆ ಮುಂದಾಗಿದ್ದಾರೆ. ನಮ್ಮ ಸಂಘದ ಕೆಲವರು ಅವರೊಟ್ಟಿಗೆ ಸೇರಿತ್ತಿರುವುದು ತಿಳಿದಿದೆ. ನಮ್ಮ ಅಧ್ಯಕ್ಷತೆ ಇಷ್ಟ ಇಲ್ಲದಿದ್ದರೆ ತಾವೇ ಅಧ್ಯಕ್ಷತೆ ವಹಿಸಿ ಸಂಘಟನೆ ಭದ್ರಪಡಿಸಬಹುದು.
ಆದರೆ, ನೋಂದಣಿ ಇಲ್ಲದ ಅನಧಿಕೃತ ಸಂಘಕ್ಕೆ ಸೇರಿ ವಂಚನೆಗಳಿಗೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಿಗೆ ಸಿಲುಕಿ ಗ್ರಾಹಕರ ನಂಬಿಕೆ ಕಳೆದುಕೊಳ್ಳಬಾರದು. ಅವರೊಂದಿಗೆ ಹೋಗುವವರು ಕಾರ್‌ಗಳನ್ನು ನಮ್ಮ ಸ್ಟ್ಯಾಂಡ್‌ನಲ್ಲಿ ಬಿಡುವಂತಿಲ್ಲ. ಯಾವುದೇ ಸಮಸ್ಯೆಗಳಲ್ಲಿ ಸಿಲುಕಿಕೊಂಡರೆ ನಮ್ಮ ಒಕ್ಕೂಟ ಪರಿಹಾರಕ್ಕೆ ಬರುವುದಿಲ್ಲ ಎಂದು ತಿಳಿಸಿದರು. ಪದಾಧಿಕಾರಿಗಳಾದ ಎಂ.ತಿಪ್ಪೇಸ್ವಾಮಿ, ರಾಜಣ ಶೆಟ್ಟಿ, ಕೊಟ್ರೇಶ, ಎಂ.ವಿರೂಪಾಕ್ಷಿ, ಎ.ಕೊಟ್ರೇಶ ಇತರರಿದ್ದರು.