ಹಗರಿಬೊಮ್ಮನಹಳ್ಳಿಯಲ್ಲಿ ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಮತದಾರರ ಹಕ್ಕು ದೃಢಪಡಿಸಿಕೊಳ್ಳುವ ಪ್ರತಿ ವಿತರಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್, ಪ್ರದಾನ ಕಾರ್ಯದರ್ಶಿ ದಿವಾಕರ್, ನಗರಘಟಕದ ಅಧ್ಯಕ್ಷ ಮಂಜುನಾಥ ಹಿರೇಮಠ, ಪುರಸಭೆ ಸದಸ್ಯ ದೀಪಕ್ ಸಾ ಕಠಾರಿ ಇದ್ದರು.
- ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿಕೆ
ಹಗರಿಬೊಮ್ಮನಹಳ್ಳಿ: ಮತಪಟ್ಟಿ ಪರಿಷ್ಕರಣೆಗೆ ಜನ ಜಾಗೃತರಾಗಿ ಯಾವುದೇ ಊಹಾ ಪೋಹಗಳಿಗೆ ಕಿವಿಗೊಡಬೇಡಿ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಹೇಳಿದರು.
ಹಳೇ ಊರಿನ ವ್ಯಾಪ್ತಿಯಲ್ಲಿ ಭಾನುವಾರ ಮತದಾರರ ಹಕ್ಕು ದೃಢಪಡಿಸಿಕೊಳ್ಳುವ ಪ್ರತಿ ವಿತರಿಸಿ ಮಾತನಾಡಿದರು. ಚುನಾವಣೆಗೆ ಸಾಕಷ್ಟು ಸಮಯವಿದೆ. ಸರ್ಕಾರದ ಮುಂಜಾಗ್ರತಾ ಕ್ರಮವಾಗಿ ಮತದಾರರ ಮತಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಇದರಿಂದ ಕೆಲವರು ಸಾರ್ವಜನಿಕರ ದಾರಿ ತಪ್ಪಿಸುತ್ತಿದ್ದಾರೆ. ಎಸ್‌ಐಆರ್ ಉದ್ದೇಶವೇ ಅಕ್ರಮ, ವಲಸೆ, ಎರಡೆರಡು ಕಡೆ ಮತಹಕ್ಕು ಪಡೆಯುವುದು ಸೇರಿ ವಿವಿಧ ಲೋಪಗಳನ್ನು ಸರಿಪಡಿಸುವ ಪ್ರಕ್ರಿಯೆ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಬೆಣಕಲ್ ಪ್ರಕಾಶ್, ಪ್ರದಾನ ಕಾರ್ಯದರ್ಶಿ ದಿವಾಕರ್, ನಗರಘಟಕದ ಅಧ್ಯಕ್ಷ ಮಂಜುನಾಥ, ಉಪಾಧ್ಯಕ್ಷ ಮಲ್ಲಯ್ಯ, ಹಿರೇಮಠ, ಜಿಲ್ಲಾ ಕಾರ್ಯದರ್ಶಿ ವಿ.ಕನಕಪ್ಪ, ಪುರಸಭೆ ಸದಸ್ಯ ದೀಪಕ್ ಸಾ ಕಠಾರಿ, ಪ್ರಮುಖರಾದ ಅಂಬಳಿ ರವಿಂದ್ರಗೌಡ, ಸುರೇಶ್, ಎಂ.ಮಂಜುನಾಥ, ಕಾಳೇಶ, ಸಾಲ್ಮನಿ ನಾಗರಾಜ್, ಬುಡೇನ್‌ಸಾಬ್ ಇತರರಿದ್ದರು.