ಹಗರಿಬೊಮ್ಮನಹಳ್ಳಿಯಲ್ಲಿ ಯೋಗ, ಪ್ರಾಣಾಯಾಮ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆನಂದ ಯೋಗಾಶ್ರಮದ ಯೋಗಗುರು ಮಂಜುನಾಥ ಗುರೂಜಿಯನ್ನು ಸನ್ಮಾನಿಸಲಾಯಿತು. ನಿವೃತ್ತ ಎಎಸ್‌ಐ ಮಲ್ಲಪ್ಪ, ಪ್ರಮುಖರಾದ ಬುಡ್ಡಿ ಬಸವರಾಜ್, ಕೂಡಿಹಳ್ಳಿ ಮಂಜುನಾಥ, ವೀರೇಶ್, ಅಹ್ಮದ್, ಹೊಸಮನೆ ಮಂಜುನಾಥ್, ಶಿವಪ್ಪ, ವೀರಭದ್ರಯ್ಯ ಇತರರಿದ್ದರು.
- ಯೋಗಗುರು ಮಂಜುನಾಥ್ ಗುರೂಜಿ ಸಲಹೆ
- ಹಗರಿಬೊಮ್ಮನಹಳ್ಳಿ ಯೋಗ ಪ್ರಾಣಾಯಾಮ ತರಬೇತಿ
ಹಗರಿಬೊಮ್ಮನಹಳ್ಳಿ: ತಾಂತ್ರಿಕ ಯುಗದಲ್ಲಿ ನಾವೆಲ್ಲ ಆರೋಗ್ಯದ ಕಾಳಜಿಯನ್ನು ಮರೆತಿರುವುದು ವಿಪರ್ಯಾಸ ಎಂದು ಜಾಗಟಗೆರೆ ಆನಂದ ಯೋಗಾಶ್ರಮದ ಮಂಜುನಾಥ ಗುರೂಜಿ ಅಭಿಪ್ರಾಯಪಟ್ಟರು.
ಪಟ್ಟಣದ ಪಾಂಡುರಂಗ ದೇಗುಲದಲ್ಲಿ 12 ದಿನ ಆಯೋಜಿಸಿದ್ದ ಆನಂದ ಯೋಗ ಪ್ರಾಣಾಯಾಮ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಇತ್ತೀಚೆಗೆ ಮಾತನಾಡಿದರು.
ಮನುಷ್ಯನಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ. ನಾವು ಸೇವಿಸುವ ಆಹಾರದ ಪದ್ಧತಿಯನ್ನು ಬದಲಾಯಿಸಿಕೊಂಡು, ನಮ್ಮ ಆರೋಗ್ಯ ರಕ್ಷಣೆಗಾಗಿ ಪ್ರತಿದಿನ ಒಂದು ಗಂಟೆ ಪ್ರಾಣಾಯಾಮ ಮಾಡಬೇಕು. ರಾತ್ರಿ ಮೊಬೈಲ್‌ನಿಂದ ದೂರವಿದ್ದು, ನಿದ್ದೆ ಮಾಡಿದಾಗ ಮೈ-ಮನಸ್ಸು ಸ್ವಚ್ಛವಾಗಿರಲಿದೆ ಎಂದರು.
ಶಿಬಿರಾರ್ಥಿಗಳು 12 ದಿನಗಳ ತರಬೇತಿಯಿಂದ ಆಗಿರುವ ಜೀವನಶೈಲಿ ಬದಲಾವಣೆಗಳ ಬಗ್ಗೆ ವಿಷಯ ಹಂಚಿಕೊಂಡರು.