ಶ್ರೀರಾಮುಲು 
ಬಳ್ಳಾರಿ

ಹಗರಣದ ಭಯ ಡಿಕೆಶಿಗೆ ಕಾಡುತ್ತಿದೆ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಬಿ.ಶ್ರೀರಾಮಲು ಆರೋಪ

ಬಳ್ಳಾರಿ :

ವಾಲ್ಮೀಕಿ ನಿಗಮದ ಹಗರಣದಲ್ಲಿ ಸಚಿವ ಬಿ.ನಾಗೇಂದ್ರ ಸತ್ಯ ಹೇಳಿದರೆ ಎಐಸಿಸಿ ನಾಯಕರಾದ ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಹಾಗೂ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಹೆಸರು ಹೊರಬರುತ್ತದೆ ಎಂಬ ಭಯ ಸಿಎಂ ಡಿ.ಕೆ.ಶಿವಕುಮಾರ್‌ಗೆ ಕಾಡುತ್ತಿದೆ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಆರೋಪಿಸಿದರು.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಬಿ.ನಾಗೇಂದ್ರ ಅವರ ಅಪ್ತ ಕಾರ್ಯದರ್ಶಿಯ ಡಿಜಿಟಲ್ ಸಹಿಯ ಡೈರಿಯಲ್ಲಿ ಯಾರಿಗೆ ಎಷ್ಟೆಷ್ಟು ಹಣ ತಲುಪಿದೆ ಎಂಬುದು ಬರೆದಿಟ್ಟಿದ್ದಾರೆ. ಅಲ್ಲದೆ, ಶಾಸಕರಾದ ಜೆ.ಎನ್.ಗಣೇಶ್, ನಾರಾ ಭರತರೆಡ್ಡಿ, ಬಿ.ಎಂ.ನಾಗರಾಜ, ಡಾ.ಎನ್.ಟಿ.ಶ್ರೀನಿವಾಸ್ ಅವರ ಹೆಸರುಗಳಿವೆ ಎಂದರು.
ನಾಗೇಂದ್ರ ಅವರ ರಕ್ಷಣೆಗೆ ಕಾಂಗ್ರೆಸ್‌ನ ಯಾವ ಶಾಸಕರೂ ಬರುತ್ತಿಲ್ಲ. ಅವರೇ ತಪ್ಪು ಮಾಡಿರುವುದಾಗಿ ಹೇಳುತ್ತಿದ್ದಾರೆ. ಈಗ ಪ್ರಕರಣ ಮುಚ್ಚಿಹಾಕಲು ನಾಗೇಂದ್ರ ದಲಿತ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ. ಕೈಯಲ್ಲಿ ಸಂವಿಧಾನದ ಪುಸ್ತಕ ಇಟ್ಟುಕೊಂಡು ಓಡಾಡುವ ನಿನಗೆ ಮನುಷ್ಯತ್ವ ಇದೆಯಾ? ಮನುಷ್ಯತ್ವ ಇದ್ದರೆ ತಕ್ಷಣ ರಾಜೀನಾಮೆ ನೀಡು. ಸ್ವಾತಂತ್ರೃ ಬಂದ ಮೇಲೆ ದಲಿತರ ಹಣ ಹೊಡೆದ ಮೊದಲ ವ್ಯಕ್ತಿ ನೀನು, ಇದು ಇತಿಹಾಸದಲ್ಲಿ ಉಳಿದುಹೋಗುತ್ತದೆ. ನಾಗೇಂದ್ರ ಕಳಂಕಿತನಾಗಿದ್ದರೆ ಯಾರೂ ಮಂತ್ರಿ ಆಗಲ್ಲ. ಮೂರು ಬಿಟ್ಟವರು ಮಾತ್ರ ಮಂತ್ರಿ ಆಗುತ್ತಾರೆ, ನೀನು ಆರು ಬಿಟ್ಟವನು ಎಂದು ಏಕವಚನದಲ್ಲೇ ಆಕ್ರೋಶ ಹೊರಹಾಕಿದರು.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಿಎಂ ಡಿ.ಕೆ. ಶಿವಕುಮಾರ್ ಅವರು ವ್ಯವಹಾರಿಕ ಅಥವಾ ಬೇರೆ ಬೇರೆ ಕಾರಣಕ್ಕೆ ಜಾಮೀನಿನ ಮೇಲೆ ಹೊರಗಿರಬಹುದು. ಆದರೆ, ಅವರು ಎಲ್ಲೂ ಸರ್ಕಾರದ ಹಣ ಹೊಡೆದಿರುವ ಉದಾಹರಣೆಯಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಗುಲಾಮರಾಗಿ ‘ವಂದೇ ಮಾತರಂ’ ಗೀತೆ ಹಾಡಲ್ಲ ಎನ್ನುತ್ತಿದ್ದಾರೆ. ಅವರು ದೇಶಕ್ಕೆ ನಿಷ್ಠರಾಗಿದ್ದರೆ ಖಂಡಿತ ‘ವಂದೇ ಮಾತರಂ’ ಹಾಡುತ್ತಿದ್ದರು ಎಂದು ಕಾಂಗ್ರೆಸ್ ನಾಯಕರ ಇತಿಹಾಸ ಪ್ರಶ್ನಿಸಿದರು.
===