ಸಂಡೂರು ತಾಲೂಕು ಕಚೇರಿ ಸಭಾಂಗಣದಲ್ಲಿ ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಜಯಂತಿ ಆಚರಿಸಲಾಯಿತು.  
ಬಳ್ಳಾರಿ

ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ

ಅಶೋಕ್ ಕುಮಾರ್ ಎನ್
ಸಂಡೂರು: ಡಾ.ಬಾಬು ಜಗಜೀವನರಾಮ್ ಅವರಿಗೆ ಬಾಲ್ಯದಿಂದಲೇ ಅಧ್ಯಾತ್ಮದ ಕಡೆ ಒಲವಿತ್ತು ಎಂದು ಸಂಸದ ಈ.ತುಕಾರಾಮ್ ಹೇಳಿದರು.
ಪಟ್ಟಣದಲ್ಲಿ ತಾಲೂಕು ಆಡಳಿತ ಹಾಗೂ ದಲಿತ ಸಂಘಟನೆಗಳಿಂದ ಆಯೋಜಿಸಿದ್ದ ಡಾ.ಬಾಬು ಜಗಜೀವನರಾಮ್ ಜಯಂತಿ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದರು. ಬಾಬೂಜಿ ಅವರಿಗೆ ಓದು ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಅಪಾರವಾದ ಒಲವಿತ್ತು. ಬಾಬೂಜಿ ಅವರಿಗೆ ಸ್ವಾಭಿಮಾನ ತಂದೆಯಿಂದ ರಕ್ತಗತವಾಗಿ ಬಂದಿತ್ತು. 6ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡಿದ್ದ ಬಾಬೂಜಿ ವಿದ್ಯಾರ್ಥಿ ವೇತನ ಪಡೆದು ಮೆಟ್ರಿಕ್ಯುಲೇಷನ್ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದರು. ಸುದೀರ್ಘ 31ವರ್ಷ ಸಂಸತ್ ಸದಸ್ಯರಾಗಿ, ಕೇಂದ್ರ ಸರ್ಕಾರದಲ್ಲಿ ಕಾರ್ಮಿಕ, ಕೃಷಿ, ರೈಲ್ವೆ, ರಕ್ಷಣಾ, ಸಾರಿಗೆ ಮತ್ತು ಸಂಪರ್ಕ ಸಚಿವರಾಗಿ ಸೇವೆ ಸಲ್ಲಿಸಿದರು. ಕೃಷಿ ಸಚಿವರಾಗಿ ದೇಶವನ್ನು ಆಹಾರದಲ್ಲಿ ಸ್ವಾವಲಂಬಿಯಾಗಿಸಿ ಹಸಿರು ಕ್ರಾಂತಿಯ ಹರಿಕಾರರೆನಿಸಿದರು. ಬಾಬೂಜಿ ನಿಲುವುಗಳು ಐತಿಹಾಸಿಕವಾಗಿದ್ದವು ಎಂದರು.
ತಹಸೀಲ್ದಾರ್ ಅನಿಲ್ ಕುಮಾರ್, ತಾಪಂ ಇಒ ಮಡಗಿನ ಬಸಪ್ಪ, ಸಮಾಜ ಕಲ್ಯಾಣ ಇಲಾಖೆ ಎಡಿ ಎನ್.ಕೆ.ವೆಂಕಟೇಶ, ಆದಿಜಾಂಭವ ಸಂಘದ ಅಧ್ಯಕ್ಷ ಅಧ್ಯಕ್ಷ ನಿಂಗಪ್ಪ ಐಹೊಳೆ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ದಲಿತ ಸಂಘರ್ಷ ಸಮಿತಿ ಸಂಚಾಲಕ ಹನುಮಂತರೆಡ್ಡಿ, ರಾಮಕೃಷ್ಣ ಹೆಗಡೆ, ಹೊಸಳ್ಳಿ ತಾಯಪ್ಪ, ಮರಿಸ್ವಾಮಿ, ಕೆ.ದೇವದಾಸ್, ಎಲ್.ಎಚ್.ಶಿವಕುಮಾರ್, ವೈಟಿಜಿ ಮಲಿಯಪ್ಪ, ಕುಮಾರ್, ಮಲ್ಲೇಶ್ ಕಮ್ಮತ್ತೂರು ಮುಂತಾದವರಿದ್ದರು.