ಕಂಪ್ಲಿ ಕೋಟೆಯ ತುಂಗಭದ್ರಾ ನದಿ ತಟದಲ್ಲಿ ನಿರ್ಮಲ ತುಂಗಭದ್ರಾ ಅಭಿಯಾನದಡಿ ಪುಣ್ಯಸ್ನಾನಕ್ಕೆ ಕಡ್ಲೆಹಿಟ್ಟು ಬಳಸುವಂತೆ ಜಾಗೃತಿ ಮೂಡಿಸಲು ಭಿತ್ತಿಪತ್ರ ಪ್ರದರ್ಶಿಸಿದರು. ಪ್ರಧಾನ ಸಂಚಾಲಕ ಡಾ.ಭಟ್ಟ ರಾಮು, ಸಂಚಾಲಕರಾದ ಅಮರೇಗೌಡ, ಇಟಗಿ ವಿರೂಪಾಕ್ಷಿ, ರಾಜರಾಮ್ ಚಿತ್ರಗಾರ, ಟಿ.ಕೃಷ್ಣ ಇತರರಿದ್ದರು. 
ಬಳ್ಳಾರಿ

ಕಡ್ಲೆ ಹಿಟ್ಟಿನ ಪ್ಯಾಕೆಟ್ ವಿತರಣೆ

ಗಾಯತ್ರಿ ಮಾಲಿಪಾಟೀಲ್

ಪ್ರಮುಖ ಮುಖ್ಯಾಂಶಗಳು

  • ಮಕರ ಸಂಕ್ರಮಣ
  • ಜಾಗೃತಿ
  • ಪುಣ್ಯ ಸ್ನಾನ

ಕಡ್ಲೆ ಹಿಟ್ಟಿನ ಪ್ಯಾಕೆಟ್ ವಿತರಣೆ

ಕಂಪ್ಲಿ: ಮಕರ ಸಂಕ್ರಮಣದ ನಿಮಿತ್ತ ಪುಣ್ಯ ಸ್ನಾನಕ್ಕಾಗಿ ತುಂಗಭದ್ರಾ ನದಿಗೆ ಬರುವವರಿಗೆ ನಿರ್ಮಲ ತುಂಗಭದ್ರಾ ಅಭಿಯಾನದಡಿ, ಸ್ವಚ್ಛ ತುಂಗಭದ್ರೆ ಜಾಗೃತಿಗಾಗಿ ಗುರುವಾರ ಕಡ್ಲೆ ಹಿಟ್ಟಿನ ಪ್ಯಾಕೆಟ್‌ಗಳನ್ನು ವಿತರಿಸಲಾಯಿತು.

ಸಂಚಾಲಕ ಡಾ.ಭಟ್ಟ ರಾಮು ಮಾತನಾಡಿ, ಸಾವಿರಾರು ಭಕ್ತರು ಏಕಕಾಲಕ್ಕೆ ನದಿಯಲ್ಲಿ ಸ್ನಾನಕ್ಕೆ ಸೋಪು, ಶಾಂಪು ಬಳಸಿ ಸ್ನಾನ ಮಾಡಿದಲ್ಲಿ ನದಿ ನೀರು ಕಲುಷಿತವಾಗಿ ಜಲಚರಗಳಿಗೆ ಮಾರಕವಾಗುತ್ತದೆ. ನದಿ ನೀರು ನಿರ್ಮಲತರ ಕಳೆದುಕೊಂಡು ವಿವಿಧ ರೋಗಗಳಿಗೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಅಭಿಯಾನದಡಿ ಕಡ್ಲೆ ಹಿಟ್ಟಿನ ಪ್ಯಾಕೆಟ್‌ಗಳನ್ನು ಉಚಿತವಾಗಿ ವಿತರಿಸಲಾಗಿದೆ ಎಂದರು.
ಸಂಚಾಲಕರಾದ ಅಮರೇಗೌಡ, ಇಟಗಿ ವಿರೂಪಾಕ್ಷಿ, ರಾಜರಾಮ್ ಚಿತ್ರಗಾರ, ಟಿ.ಕೃಷ್ಣ, ಬಿ.ವಿ.ಗೌಡ, ನಿರಂಜನಗೌಡ, ಯು.ಬಸವರಾಜ, ದೇವದಾಸ್, ಗೋವಿಂದ, ಶ್ರೀನಿವಾಸ್ ಶ್ರೇಷ್ಠಿ, ಎನ್.ಎಂ.ಪತ್ರಯ್ಯಸ್ವಾಮಿ ಇತರರಿದ್ದರು.