ಕೂಡ್ಲಿಗಿ ಪ್ರವಾಸಿ ಮಂದಿರದಲ್ಲಿ ಕ್ಷೇತ್ರದ ಪ್ರಗತಿಯ ಮುನ್ನೋಟದ ಸಭೆಯಲ್ಲಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ ಮಾತನಾಡಿದರು. ನಿಕಟಪೂರ್ವ ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ತಹಸೀಲ್ದಾರ್ ವಿ.ಕೆ.ನೇತ್ರಾವತಿ, ನಿವೃತ್ತ ಇಒ ಜಿ.ಎಂ.ಬಸಣ್ಣ, ಉದಯಜನ್ನು, ಜೆ.ಬಸವರಾಜ ಇದ್ದರು. 
ಬಳ್ಳಾರಿ

ವಸತಿ ಹೀನರಿಗೆ ಮನೆಗಳ ಹಂಚಿಕೆ

ಪ್ರಮುಖ ಮುಖ್ಯಾಂಶಗಳು

  • ಕೆರೆಗಳ
  • ಅಭಿವೃದ್ಧಿ
  • ಕೈಗೊಂಡು
ಕೂಡ್ಲಿಗಿ: ಮೂರು ವಷರ್ಗಳ ಅವಧಿಯಲ್ಲಿ ಜನರಿಗೆ ಮಾತು ಕೊಟ್ಟಂತೆ ಶಾಶ್ವತ ಕುಡಿಯುವ ನೀರು, ರೈತರಿಗೆ ನೀರಾವರಿ, ವಿದ್ಯುತ್ ಸೇರಿ ಮೂಲ ಸೌಕರ್ಯ ಒದಗಿಸಲಾಗಿದೆ ಎಂದು ಶಾಸಕ ಡಾ.ಎನ್.ಟಿ.ಶ್ರೀನಿವಾಸ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಕ್ಷೇತ್ರದ ಪ್ರಗತಿಯ ಮುನ್ನೋಟದ ಸಭೆಯಲ್ಲಿ ಮಾತನಾಡಿದರು. ನರೇಗಾ ಯೋಜನೆಯಲ್ಲಿ ಸಮರ್ಪಕವಾಗಿ ಕೂಲಿ ಕಾರ್ಮಿಕರಿಗೆ ಉದ್ಯೋಗ ನೀಡಲಾಗಿದೆ. ಕೆರೆಗಳ ಅಭಿವೃದ್ಧಿ ಕೈಗೊಂಡು ಈ ಭಾಗದ ರೈತರ ಬಹು ನಿರೀಕ್ಷಿತ 74 ಕೆರೆಗಳ ನೀರು ತುಂಬಿಸುವ ಯೋಜನೆ ಸಾಕಾರವಾಗಿದೆ. ಪಟ್ಟಣಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಕಾಮಾಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಪಟ್ಟಣದ ಜನತೆಗೆ ನೀರಿನ ಬವಣೆ ದೂರವಾಗಲಿದೆ.
ಈಗಾಗಲೇ 450ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ಕೊಠಡಿಗಳನ್ನು ಅಭಿವೃದ್ಧಿಪಡಿಸಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉತ್ತೇಜನ ನೀಡಲಾಗಿದೆ. ಪಟ್ಟಣದ ಹೊರ ವಲಯದಲ್ಲಿ ವಸತಿ ಹೀನರಿಗೆ 10 ಎಕರೆ ವಿಸ್ತೀರ್ಣದಲ್ಲಿ ಸರ್ಕಾರದಿಂದ ಮನೆಗಳನ್ನು ನೀಡಲಿದ್ದು, ಅರ್ಜಿಗಳನ್ನು ಪಪಂ ಕಚೇರಿಯಲ್ಲಿ ಪಡೆಯಲಾಗುತ್ತಿದೆ ಎಂದರು.
ನಿವೃತ್ತ ಇಒ ಜಿ.ಎಂ.ಬಸಣ್ಣ, ಡಿವೈಎಸ್ಪಿ ಮಲ್ಲೇಶ ದೊಡ್ಡಮನಿ, ಸಿಪಿಐ ಪ್ರಲ್ಹಾದ್ ಚನ್ನಗಿರಿ, ಪ್ರಮುಖರಾದ ಟಿ.ಜಿ.ಮಲ್ಲಿಕಾರ್ಜುನ ಗೌಡ, ಟಿ.ವೆಂಕಟೇಶ, ಜಯರಾಂ ನಾಯಕ, ಸಣ್ಣ ಕೊತ್ಲಪ್ಪ, ಸಿರಬಿ ಮಂಜುನಾಥ, ಎಸ್.ಸುರೇಶ, ಢಾಣಿ ರಾಘವೇಂದ್ರ, ನಲ್ಲಮುತ್ತಿ ದುರುಗೇಶ ಇತರರಿದ್ದರು.