ಸಿರಗುಪ್ಪ ತಾಲೂಕಿನ 64-ಹಳೇಕೋಟೆ ಗ್ರಾಮದಲ್ಲಿ ಜಿಲ್ಲಾ ಸರ್ವೇಕ್ಷಣಾ ಘಟಕ ಮತ್ತು ತಾಲೂಕು ಆರೋಗ್ಯ ಕಚೇರಿ ತಂಡದಿಂದ ಡೆಂೆ ಜ್ವರದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಿನಿ, ಡಾ.ವಿಶಾಲಾಕ್ಷಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭೀಮರಾಜ್ ರೆಡ್ಡಿ ಇದ್ದರು. 
ಬಳ್ಳಾರಿ

ಘನತ್ಯಾಜ್ಯ ಸಮರ್ಪಕ ವಿಲೇವಾರಿ ಮಾಡಿ

ಶಾಮಸುಂದರ್ ಕೊಪ್ಪಳಕರ್
ಸಿರಗುಪ್ಪ: ಡೆಂೆ ಜ್ವರದ ಬಗ್ಗೆ ಭಯ ಬೇಡ, ಜಾಗೃತಿ ಅಗತ್ಯ ಎಂದು ಜಿಲ್ಲಾ ಕೀಟಶಾಸ್ತ್ರಜ್ಞೆ ನಂದಿನಿ ಹೇಳಿದರು.
ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ, ಬಾಗೇವಾಡಿ ವ್ಯಾಪ್ತಿಯ 64-ಹಳೇಕೋಟೆ ಗ್ರಾಮದಲ್ಲಿ ಸಂಶಯಾಸ್ಪದ ಜ್ವರದ ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಮಂಗಳವಾರ ಜಿಲ್ಲಾ ಸರ್ವೇಕ್ಷಣ ಘಟಕ ಮತ್ತು ತಾಲೂಕು ಆರೋಗ್ಯ ಕಚೇರಿ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಚರಂಡಿಗಳ ಸ್ವಚ್ಛತೆ, ಬ್ಲೀಚಿಂಗ್ ಪೌಡರ್ ಹಾಕುವುದು, ನಿಂತ ನೀರಿನ ತಾಣಗಳಲ್ಲಿ ಕ್ರೂಡ್ ಆಯಿಲ್ ಹಾಕುವುದು, ಘನತ್ಯಾಜ್ಯ ವಸ್ತುಗಳು, ಹಳೇ ಟೈರ್‌ಗಳ ಸೂಕ್ತ ವಿಲೇವಾರಿಗೆ ಸೂಚಿಸಿದರು. ಸಮೀಕ್ಷೆಯಲ್ಲಿ ನೆಗಡಿ, ಜ್ವರ, ಕೆಮ್ಮು ಸಾಮಾನ್ಯ ಪ್ರಕರಣಗಳು ಕಂಡುಬಂದಿದ್ದು, ಜ್ವರ ಕಂಡುಬಂದ ಕೂಡಲೇ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಮತ್ತು ಸಲಹೆ ಪಡೆಯಬೇಕು ಎಂದರು.
ವೈದ್ಯೆ ವಿಶಾಲಾಕ್ಷಿ ಮಾತನಾಡಿ, ಮುಂಜಾಗ್ರತಾ ಕ್ರಮವಾಗಿ ಲಾರ್ವಾ ತಾಣಗಳ ಸಮೀಕ್ಷೆ, ಜ್ವರ ಸಮೀಕ್ಷೆ ಕೈಗೊಳ್ಳಬೇಕು ಎಂದು ಆರೋಗ್ಯ ಸಿಬ್ಬಂದಿಗೆ ಸೂಚಿಸಿದರು. ಆರೋಗ್ಯ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರೊಂದಿಗೆ ಕುರುಬರ ಕಾಲನಿ, ಮಠದ ಹೊಲದಲ್ಲಿನ 210 ಮನೆಗಳಲ್ಲಿ ರ್ವಾ ಸಮೀಕ್ಷೆ ನಡೆಸಲಾಯಿತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೊಹಮ್ಮದ್ ಖಾಸಿಂ, ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಭೀಮರಾಜ್ ರೆಡ್ಡಿ, ತಾಲೂಕು ಕ್ಷೇತ್ರ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ನವೀನ್, ಆರೋಗ್ಯ ನಿರೀಕ್ಷಣಾಧಿಕಾರಿ ರಾಘವೇಂದ್ರ, ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಅಳ್ಳಮ್ಮ ಇತರರಿದ್ದರು.