ಸಾಸಲವಾಡ ಗ್ರಾಮದಲ್ಲಿ ಇತ್ತೀಚೆಗೆ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಭೂಮಿಪೂಜೆ ನೆರವೇರಿಸಿದರು. ಮುಖಂಡರಾದ ಟಿ.ಜಿ. ಮಲ್ಲಿಕಾರ್ಜುನ ಗೌಡ, ಕೋಗಳಿ ಮಂಜುನಾಥ, ಕಾವಲಿ ಶಿವಪ್ಪನಾಯಕ, ಎಸ್. ಸುರೇಶ, ಕೆ.ಎಚ್.ಎಂ.ವೀರಭದ್ರಯ್ಯ ಸ್ವಾಮಿ ಇತರರಿದ್ದರು. 
ಬಳ್ಳಾರಿ

ಗ್ರಾಮೀಣರ ಬದುಕು ಹಸನಾಗಿಸಲು ಕ್ರಮ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹೇಳಿಕೆ

ಕೂಡ್ಲಿಗಿ:

ಗ್ರಾಮೀಣರ ಬದುಕು ಹಸನಾಗಿಸಲು ರಸ್ತೆ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಮುಂದಾಗಿರುವೆ ಎಂದು ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಹೇಳಿದರು.

ತಾಲೂಕಿನ ಸಾಸಲವಾಡ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಹಳ್ಳಿಗಳ ಅಭಿವೃದ್ಧಿ ದೇಶದ ಅಭಿವೃದ್ಧಿ ಆದ್ದರಿಂದ ಕ್ಷೇತ್ರದ 216 ಹಳ್ಳಿಗೂ ನಾನು ಖುದ್ದು ಸಂಚರಿಸಿ ಅಲ್ಲಿನ ಸಮಸ್ಯೆಗಳನ್ನು ಕಂಡಿದ್ದೇನೆ. ಅದನ್ನು ಮನಗಂಡು ಈಗಾಗಲೇ 3 ಸಾವಿರ ಕೋಟಿ ರೂ. ಅನುದಾನ ತಂದು ಕ್ಷೇತ್ರದ ಸವಾರ್ಂಗೀಣ ಅಭಿವೃದ್ಧಿಗೆ ಮುಂದಾಗಿರುವೆ. ಗ್ರಾಮೀಣ ರಸ್ತೆಗಳ ಸುಧಾರಣೆ, ಗ್ರಾಮದಲ್ಲಿನ ಸಿಸಿ ರಸ್ತೆ, ಕುಡಿವ ನೀರು, ಶಾಲಾ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆಗೆ ಕೊಠಡಿಗಳು, ವಸತಿ ನಿಲಯ ಸೇರಿದಂತೆ ವಸತಿ ಸಹಿತ ಶಾಲೆಗಳ ಮಂಜೂರಾತಿ ಮಾಡಿಸಿರುವೆ. ಕೂಡ್ಲಿಗಿ ಹೊರ ವಲಯದಲ್ಲಿನ ಗುಂಡಿನಹೊಳೆ ಬೀಜೋತ್ಪದನಾ ಕೇಂದ್ರದಲ್ಲಿ ಈಗಾಗಲೇ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಸ್ಥಾಪನೆಗೆ ಜಾಗ ಗುರುತಿಸಿ ಅಂದಾಜು 4 ಕೋಟಿ ರೂ. ಮಂಜೂರಾಗಿದೆ. ಅದೇ ಜಾಗದಲ್ಲಿ ಕೃಷಿ ವಿಜ್ಞಾನ ಕೇಂದ್ರ ಸ್ಥಾಪನೆ ಮಾಡಲಾಗುವುದು. ಇದರಿಂದ ಕೃಷಿಕರೇ ಹೆಚ್ಚಾಗಿರುವ ಈ ಭಾಗದಲ್ಲಿ ಅವರಿಗೆ ಈ ಮಣ್ಣಿನ ಸತ್ವ ಅರಿತು ಬೆಳೆ ಬೆಳೆಯಲು ಅನುಕೂಲವಾಗುತ್ತದೆ ಎಂದರು.
ಕ್ಷೇತ್ರದಲ್ಲಿ ಈಗಾಗಲೇ 350ಕ್ಕೂ ಹೆಚ್ಚು ಶಾಲೆಗಳನ್ನು ಅಭಿವೃದ್ಧಿಪಡಿಸಿ ನೂತನ ಭೋದನ ಕೊಠಡಿಗಳಿಗೂ ಅವಕಾಶ ಕಲ್ಪಿಸಿರುವೆ. ಹಂತ, ಹಂತವಾಗಿ ಆರೋಗ್ಯ, ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿ ಸಮಗ್ರ ಅಭಿವೃದ್ಧಿಗೆ ಮುಂದಾಗಿದ್ದು ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ 92 ಲಕ್ಷ ರೂ. ವೆಚ್ಚದಲ್ಲಿ ಗ್ರಾಮದಲ್ಲಿನ ಸಿಸಿ ರಸ್ತೆ ಹಾಗೂ ಸರ್ಕಾರಿ ಶಾಲಾ ಅಡುಗೆ ಕೋಣೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು. ಮುಖಂಡರಾದ ಟಿ.ಜಿ. ಮಲ್ಲಿಕಾರ್ಜುನ ಗೌಡ, ಕೋಗಳಿ ಮಂಜುನಾಥ, ಕಾವಲಿ ಶಿವಪ್ಪನಾಯಕ, ಎಸ್.ಸುರೇಶ, ಕೆ.ಎಚ್.ಎಂ.ವೀರಭದ್ರಯ್ಯ ಸ್ವಾಮಿ ಇತರರಿದ್ದರು.