ಕಂಪ್ಲಿ ಸಮೀಪದ ಮಾವಿನಹಳ್ಳಿಯಲ್ಲಿ ಮಹಾತ್ಮಗಾಂಧಿ ಪುಣ್ಯಸ್ಮರಣೋತ್ಸವ ನಿಮಿತ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಭಜನಾ ಕಲಾವಿದ ಎಸ್.ಕರಿಬಸಪ್ಪ ತಬಲಾ ಬಾರಿಸುವ ಮೂಲಕ ಚಾಲನೆ ನೀಡಿದರು.
ಕಂಪ್ಲಿ: ಪ್ರಾಥಮಿಕ ಶಿಕ್ಷಣ ಹಂತದಲ್ಲೇ ಮಕ್ಕಳಿಗೆ ರಂಗಭೂಮಿ, ಬಯಲಾಟ, ಸಂಗೀತ ಪರಿಚಯಿಸುವಲ್ಲಿ ಶಿಕ್ಷಕರು, ಪ್ರಗತಿಪರ ಸಂಘಟನೆಗಳು ಮುಂದಾಗಬೇಕು ಎಂದು ಭಜನಾ ಕಲಾವಿದ ಎಸ್.ಕರಿಬಸಪ್ಪ ಹೇಳಿದರು.
ಮಾವಿನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಸಿದ್ದೇಶ್ವರ ರಂಗ ಸಂಸ ಕಲ್ಚರಲ್ ಟ್ರಸ್ಟ್‌ನಿಂದ ಹಮ್ಮಿಕೊಂಡಿದ್ದ ಮಹಾತ್ಮ ಗಾಂಧಿ ಪುಣ್ಯ ಸ್ಮರಣೋತ್ಸವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು.
ಶಿಕ್ಷಕ ಜಿ.ಬಸವರಾಜ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧಿ ಪುಣ್ಯಸ್ಮರಣೋತ್ಸವ ನಿಮಿತ್ತ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಗಾಂಧಿ ಅವರ ತತ್ವ-ಆದರ್ಶಗಳನ್ನು ಮೆಲುಕು ಹಾಕಲು ಸಾಧ್ಯವಾಯಿತು ಎಂದರು.
ಬಿ.ದೊಡ್ಡಬಸಪ್ಪ ತಂಡದಿಂದ ಭಜನಾ ಪದಗಳು, ಡಿ.ಪುರುಷೋತ್ತಮ ತಂಡದಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಟ್ರಸ್ಟ್ ಅಧ್ಯಕ್ಷ ಗುರುಮಹಾಂತೇಶ, ಪದಾಧಿಕಾರಿಗಳಾದ ಕುರುಬರ ಹೇಮೇಶ್ವರ, ಕೆ.ಹಿಮಂತರಾಜ, ಗುರುಪಾದಪ್ಪ, ಬಯಲಾಟ ಕಲಾವಿದ ಬಿ.ಕೆ ಸಿದ್ದಪ್ಪ, ಧರ್ಮಪ್ಪ, ಪ್ರಮುಖರಾದ ಬಿ.ಕೆ.ನಾಗಪ್ಪ, ಮುದಿಯಪ್ಪ, ಹನುಮಂತಪ್ಪ, ರಾಮಲಿಸ್ವಾಮಿ, ಬಿ.ಕೆ.ಎರ‌್ರಿಸ್ವಾಮಿ, ಆಚಾರ್ಯಸ್ವಾಮಿ, ಯುವರಾಜ, ಬಸವರಾಜ, ಜೆ.ಗವಿಸಿದ್ದಪ್ಪ, ಕಾಳಿಂಗ, ಶಿಕ್ಷಕರಾದ ಹೊನ್ನೂರಸ್ವಾಮಿ, ಶ್ವೇತಾ ಇತರರಿದ್ದರು.