ಬಳ್ಳಾರಿಯ ವಿಎಸ್‌ಕೆ ವಿವಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚಾನೆ ಮಾಡಲಾಯಿತು. ವಕೀಲ ಎಚ್.ಮೋಹನ್ ಕುಮಾರ್,ಪ್ರೊ. ಡಾ.ಶ್ರೀನಿವಾಸ ಡಿ.ಮನಗಳ್ಳಿ , ಪ್ರೊ.ಗೌರಿ ಮಾಣಿಕ್ ಮಾನಸ, ಚಿಂತಕಿ ಎಂ.ಚಾರುಮತಿ, ಎಸ್ಸಿ-ಎಸ್ಟಿ ಕೋಶದ ನಿರ್ದೇಶಕ ಡಾ.ಕುಮಾರ ಇದ್ದರು. 
ಬಳ್ಳಾರಿ

ಪ್ರಜಾಪ್ರಭುತ್ವ ಹೊಗಳಿಕೆಗೆ ಉಳಿದಿದೆ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಸಭಾಂಗಣ
ಬಳ್ಳಾರಿ : ಇತ್ತೀಚಿನ ದಿನಗಳಲ್ಲಿ ಪ್ರಾಣಿಗಳ ಮೇಲೆ ಕಾಣುವ ಪ್ರೀತಿ, ಸಹೋದರತೆ, ವಿಶ್ವಾಸವನ್ನು ಮನುಷ್ಯರಲ್ಲಿ ಕಾಣಲಾರೆವು ಎಂದು ಹೈಕೋರ್ಟ್ ವಕೀಲ ಎಚ್.ಮೋಹನ್ ಕುಮಾರ್ ಅಭಿಪ್ರಾಯಪಟ್ಟರು.
ನಗರದ ವಿಎಸ್‌ಕೆ ವಿವಿ ಸಭಾಂಗಣದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ತರಬೇತಿ, ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಹಾಗೂ ಮೈಸೂರಿನ ಸಮಾಜ ಕಾರ್ಯಕರ್ತರ ಕ್ರಿಯಾ ಸಂಶೋಧನೆ ಸಂಸ್ಥೆ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ಅಂಬೇಡ್ಕರ ಅವರ ಬರಹಗಳು ಮತ್ತು ಭಾಷಣಗಳ ಮೂಲಕ ಭಾರತೀಯರನ್ನು ಅರ್ಥಮಾಡಿಕೊಳ್ಳುವಿಕೆ ಎಂಬುದರ ಕುರಿತಾದ ಮೂರು ದಿನಗಳ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಭಾರತೀಯರಲ್ಲಿ ಪರಸ್ಪರ ಭ್ರಾತೃತ್ವ ಸಂಬಂಧವಿರದಿದ್ದರೆ ದೇಶವು ಪ್ರಜಾಸತ್ತಾತ್ಮಕವಾಗಿ ಉಳಿಯುವುದಿಲ್ಲ ಎಂಬುದು ಬಾಬಾ ಸಾಹೇಬ ಅಂಬೇಡ್ಕರ್ ಅವರ ನಿಲುವಾಗಿತ್ತು. ಸಮಾಜದಲ್ಲಿ ಪ್ರಸ್ತುತವಾಗಿ ಅಂಬೇಡ್ಕರ ಅವರ ಕುರಿತು ಚಿಂತನೆಗಳು ಬಹಳ ಕ್ರಿಯಾಶೀಲವಾಗಿವೆ. ಮನುಷ್ಯನು ಇನ್ನೊಬ್ಬರ ಘನತೆಯನ್ನು ಅಳೆಯುವುದರಲ್ಲಿ ತಲ್ಲೀನನಾಗಿದ್ದಾನೆ. ಪ್ರಜಾಪ್ರಭುತ್ವ ಕೇವಲ ಹೊಗಳಿಕೆಯಾಗಿ ಉಳಿದಿದೆ ಎಂದರು.
ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಶ್ರೀನಿವಾಸ ಡಿ.ಮನಗಳ್ಳಿ ಮಾತನಾಡಿ, ಅಂಬೇಡ್ಕರ ಅವರ ಅಧ್ಯಯನ ಕೇಂದ್ರಗಳು ತರಬೇತಿ ಕೇಂದ್ರಗಳಾಗಬೇಕಾಗಿದೆ. ಸಮಾಜದಲ್ಲಿನ ಜಾತಿ ವ್ಯವಸ್ಥೆ ಭಾರತದ ಅಭಿವೃದ್ಧಿಗೆ ಮಾರಕವಾಗಲಿದೆ ಎಂದು ತಿಳಿಸಿದರು.