ಹೊಸ ಯರಗುಡಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಎಐಡಿಎಸ್‌ಒ ಸಂಘಟನೆಯಿಂದ ಪ್ರತಿಭಟನೆ ನಡೆಯಿತು. ಜಿಲ್ಲಾಧ್ಯಕ್ಷ ಶಾಂತಿ, ಪದಾಧಿಕಾರಿಗಳಾದ ಕಂಬಳಿ ಮಂಜುನಾಥ , ಕಾಂತೇಶ್, ತಿಪ್ಪೇಸ್ವಾಮಿ, ನಾಗಮ್ಮ, ಅಂಬಣ್ಣ, ಶೇಖರ್, ಪೋತಪ್ಪ, ಲಕ್ಷ್ಮಮ್ಮ ಇದ್ದರು. 
ಬಳ್ಳಾರಿ

ಸರ್ಕಾರಿ ಶಾಲೆ ಉಳಿವಿಗಾಗಿ ಒತ್ತಾಯ

ಪ್ರಮುಖ ಮುಖ್ಯಾಂಶಗಳು

  • ಸಂಘಟನೆ
ಬಳ್ಳಾರಿ : ತಾಲೂಕಿನ ಹೊಸ ಯರಗುಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಉಳಿವಿಗಾಗಿ ಆಗ್ರಹಿಸಿ, ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು, ಪಾಲಕರು ಬುಧವಾರ ಪ್ರತಿಭಟನೆ ನಡೆಸಿದರು.
ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷೆ ಶಾಂತಿ ಮಾತನಾಡಿ, ಹೊಸ ಯರಗುಡಿಯಲ್ಲಿ ಬಡವರಿಗಾಗಿ ಇರುವುದು ಒಂದೇ ಸರ್ಕಾರಿ ಶಾಲೆ. ಈ ಶಾಲೆಯನ್ನು ಮುಚ್ಚಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಹೋಗಬೇಕೆಂದರೆ 5 ವರ್ಷದ ಮಕ್ಕಳು ಒಂದು ಕಿಲೋ ಮೀಟರ್ ದೂರ ಹೇಗೆ ಹೋಗಬೇಕು. ಜತೆಗೆ ಅಲ್ಲಿನ ಜನರು ಶಾಲೆಯ ಕಟ್ಟಡ ಸರಿ ಇಲ್ಲದಿದ್ದಾಗ ಊರಿನ ಜನರೆಲ್ಲರೂ ಸೇರಿ ಶಾಲೆಯ ರಸ್ತೆ ಸರಿ ಮಾಡಬೇಕೆಂದು ಹೋರಾಟ ಮಾಡಿದರು. ಹಾಗೆಯೇ ಇಲ್ಲಿ 8ನೇ ತರಗತಿ ವರೆಗೂ ಶಾಲೆ ಸಹ ಮಾಡಬೇಕೆಂದು ಬೇಡಿಕೆ ಸಹ ಇಟ್ಟರು. ಹಾಗೆಯೇ ಇಲ್ಲಿ ವಾಸಿಸುವ ಜನರೆಲ್ಲರೂ ದುಡಿಯುವ ರೈತರು, ಕಾರ್ಮಿಕರು. ಬಡವರ ಮಕ್ಕಳು 150ಕ್ಕೂ ಹೆಚ್ಚು ಅಧಿಕ ಸಂಖ್ಯೆಯಲ್ಲಿ ದಾಖಲಾತಿ ಇರುವ ಸರ್ಕಾರಿ ಶಾಲೆ ಮುಚ್ಚಬಾರದು ಎಂಬುದು ಪಾಲಕರ ಆಗ್ರಹವಾಗಿದೆ. ಆದ್ದರಿಂದ, ಸಾರ್ವಜನಿಕ ಶಿಕ್ಷಣ ಉಳಿಸಿ ಜನರ ಸಮಿತಿ ನೇತೃತ್ವದಲ್ಲಿ ಸರ್ಕಾರಿ ಶಾಲೆಗಳನ್ನು ರಕ್ಷಿಸಿ, ಬಲಪಡಿಸಲು ಪ್ರಬಲ ಹೋರಾಟ ಕಟ್ಟಬೇಕು ಎಂದು ಕರೆ ನೀಡಿದರು.