ಬಳ್ಳಾರಿ ತಾಲೂಕಿನ ಬಿಟಿಪಿಎಸ್ ಮುಂಭಾಗದಲ್ಲಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಭಗತ್ ಸಿಂಗ್ ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘದ ಜಿಲ್ಲಾ ಧ್ಯಕ್ಷ ಜಟಂಗಿ ಬಸವರಾಜ್ ಮಾತನಾಡಿದರು. ಪದಾಧಿಕಾರಿಗಳಾದ ಮೆಟ್ರಿಕಿ ಅಂಬರೀ, ಗೇಣಿ ಕಾಳಪ್ಪ, ಯಲ್ಲಪ್ಪ, ಮುರಳಿ ಕೃಷ್ಣ, ವೆಂಕಟರೆಡ್ಡಿ, ಕೆ.ರಾಘವೇಂದ್ರ ಇತರರಿದ್ದರು. 
ಬಳ್ಳಾರಿ

ಸುರಕ್ಷಿತ ರಸ್ತೆಗಾಗಿ ಆಗ್ರಹ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಭಗತ್‌ಸಿಂಗ್ ಗುತ್ತಿಗೆ ಕಾರ್ಮಿಕರ ಸಂಘದಿಂದ ಪ್ರತಿಭಟನೆ

ಬಳ್ಳಾರಿ :

ತಾಲೂಕಿನ ಬಳ್ಳಾರಿ-ಕುಡತಿನಿ ಮಾರ್ಗವಾಗಿ ಕಾರ್ಯನಿರ್ವಹಿಸುವ ಗುತ್ತಿಗೆ ಕಾರ್ಮಿಕರಿಗೆ ತಕ್ಷಣವೇ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂಬುದಾಗಿ ಆಗ್ರಹಿಸಿ, ತಾಲೂಕಿನ ಬಿಟಿಪಿಎಸ್ ಘಟಕ ಮುಂಭಾಗದಲ್ಲಿ ಭಗತ್ ಸಿಂಗ್ ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘದಿಂದ ಪ್ರತಿಭಟನೆ ನಡೆಯಿತು.

ಸಂಘ ಜಿಲ್ಲಾಧ್ಯಕ್ಷ ಜಟಂಗಿ ಬಸವರಾಜ್ ಮಾತನಾಡಿ, ಕಳೆದ ಕೆಲ ದಿನಗಳಿಂದ ಕರ್ತವ್ಯಕ್ಕೆ ಹಾಜರಾಗಲು ಬಳ್ಳಾರಿಯಿಂದ ಕುಡತಿನಿ ಮಾರ್ಗವಾಗಿ ಬರುತ್ತಿದ್ದಾಗ, ಕುಡತಿನಿ ಟೋಲ್ ಗೇಟ್ ಸಮೀಪ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಕಾರ್ಮಿಕ ಹನುಮೇಶ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಘಟನೆ ಕಾರ್ಮಿಕ ವಲಯದಲ್ಲಿ ತೀವ್ರ ಆತಂಕ ಹಾಗೂ ದುಃಖ ಮಾಡಿದೆ. ರಾಜ್ಯದ ಬೆಳಕಿಗಾಗಿ ಹಗಲು-ರಾತ್ರಿ ಎನ್ನದೆ ಜೀವದ ಹಂಗು ತೊರೆದು ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರು ಪ್ರತಿದಿನ ರಾಷ್ಟ್ರೀಯ ಹೆದ್ದಾರಿ- 67 ಮೂಲಕ ಪ್ರಯಾಣಿಸುತ್ತಾರೆ. ಆದರೆ ಇವರಿಗೆ ಯಾವುದೇ ಸುರಕ್ಷಿತ ಸಾರಿಗೆ ವ್ಯವಸ್ಥೆ ಇಲ್ಲದಿರುವುದು ಆತಂಕಕಾರಿ ವಿಷಯ. ಮಳೆಗಾಲದಲ್ಲಿ ಅಪಘಾತದ ಅಭದ್ರತೆ ಮತ್ತಷ್ಟು ಹೆಚ್ಚುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಹಿಂದೆ ಕೂಡ ಹಲವಾರು ಬಾರಿ ಬಿಟಿಪಿಎಸ್ ಆಡಳಿತ ಮಂಡಳಿಗೆ ಸಂಸ್ಥೆಯ ವತಿಯಿಂದ ಬಸ್ ಹಾಗೂ ಸಾರಿಗೆ ವ್ಯವಸ್ಥೆ ಕಲ್ಪಿಸುವಂತೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಬಳ್ಳಾರಿ-ಕುಡತಿನಿ ಮಾರ್ಗವಾಗಿ ಸಂಚರಿಸುವ ಎಲ್ಲ ಗುತ್ತಿಗೆ ಕಾರ್ಮಿಕರಿಗೆ ಕೆಪಿಸಿಎಲ್ ವತಿಯಿಂದ ತಕ್ಷಣವೇ ಸುರಕ್ಷಿತ ಬಸ್ ಸಾರಿಗೆ ವ್ಯವಸ್ಥೆ ಒದಗಿಸಬೇಕು. ಮೃತಪಟ್ಟ ಕಾರ್ಮಿಕನ ಕುಟುಂಬಕ್ಕೆ ತಕ್ಷಣವೇ ನ್ಯಾಯಯುತ ಹಾಗೂ ಮಾನವೀಯ ಆಧಾರದ ಮೇಲೆ ಸೂಕ್ತ ಪರಿಹಾರ ಧನ ನೀಡಬೇಕು ಎಂದು ಆಗ್ರಹಿಸಿದರು.
===