ಕೆ.ಸೋಮಶೇಖರ್ 
ಬಳ್ಳಾರಿ

ಸೆ.2ರಂದು ಅಹೋರಾತ್ರಿ ಧರಣಿ

ಪ್ರಮುಖ ಮುಖ್ಯಾಂಶಗಳು

  • ಕನಿಷ್ಠ ವೇತನ ಪರಿಷ್ಕರಿಸಿ

ಬಳ್ಳಾರಿ :

ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆ ಜಾರಿ ತಡೆ ಖಂಡಿಸಿ, ಸೆ.2ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಎಐಯುಟಿಸಿ ಸಂಘಟನೆಯ ರಾಜ್ಯಾಧ್ಯಕ್ಷ ಕೆ.ಸೋಮಶೇಖರ್ ಹೇಳಿದರು.

ನಗರದ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಾರ್ಮಿಕರ ಸುದೀರ್ಘ ಹೋರಾಟದ ಫಲವಾಗಿ ಕಳೆದ 2026ರ ಮೇ 22ರಂದು ಸರ್ಕಾರವು 81 ನಿಗದಿತ ಉದ್ಯೋಗಗಳಿಗೆ ಕನಿಷ್ಠ ವೇತನ ಪರಿಷ್ಕರಿಸಿ ಅಂತಿಮ ಅಧಿಸೂಚನೆ ಹೊರಡಿಸಿತ್ತು. ಆದರೆ, ಉದ್ಯಮಿಗಳ ಹಿತಾಸಕ್ತಿಗೆ ಶರಣಾಗಿ ಆದೇಶದ ಮರು ಪರಿಶೀಲನೆಗೆ ಸಂಪುಟ ಉಪಸಮಿತಿ ರಚಿಸಿ ಜಾರಿಗೆ ತಡೆ ನೀಡಿರುವುದು ಕಾರ್ಮಿಕ ವಿರೋಧಿ ಧೋರಣೆಯಾಗಿದೆ.

ಸೆ.2 ರಂದು ನಡೆಯುವ ಧರಣಿಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ಸಹಸ್ರಾರು ಕಾರ್ಮಿಕರು ಭಾಗವಹಿಸಿ ಯಶ್ವಸಿಗೊಳಿಸಬೇಕು ಎಂದು ಕರೆ ನೀಡಿದರು. ಸಂಘಟನೆ ಪದಾಧಿಕಾರಿಗಳಾದ ಎ.ದೇವರಾಸ್, ಡಾ.ಎನ್.ಪ್ರಮೋದ್, ಸುರೇಶ್, ಮುರಳಿ ಕೃಷ್ಣ, ಚಿಟ್ಟೆಮ್ಮ ಇತರರಿದ್ದರು.