ಕಂಪ್ಲಿಯಲ್ಲಿ ಬಲಿಜ ಸಂಘದಿಂದ ಆಯೋಜಿಸಿದ್ದ ಕಾರ್ತೀಕೋತ್ಸವ ಕಾರ್ಯಕ್ರಮವನ್ನು ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಲೋಕೇಶ ಉದ್ಘಾಟಿಸಿದರು. ಪ್ರಮುಖರಾದ ರಂಗನಾಥ, ಎಂ.ಮಲ್ಲಿಕಾರ್ಜುನ, ಬಿ.ವೆಂಕಟೇಶ, ಬಿ.ರಂಗಸ್ವಾಮಿ, ಕವಿತಾಳ ವಿದ್ಯಾ ಇತರರಿದ್ದರು.
- Balija Sangha
- Kartik Festival
ಕಂಪ್ಲಿ: ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವುದೇ ದೀಪದ ಸಂಕೇತವಾಗಿದ್ದು, ಪ್ರತಿಯೊಬ್ಬರಲ್ಲೂ ಅಂತರಂಗದ ಜ್ಞಾನ ಬೆಳಗಬೇಕಿದೆ ಎಂದು ಬಲಿಜ ಸಂಘದ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಲೋಕೇಶ ಹೇಳಿದರು.
ಮಾರುತಿನಗರದಲ್ಲಿನ ಯೋಗಿನಾರೇಯಣ ಯತೀಂದ್ರ ಭವನದಲ್ಲಿ ಬಲಿಜ ಸಂಘದಿಂದ ಆಯೋಜಿಸಿದ್ದ 9ನೇ ವರ್ಷದ ಕಾರ್ತೀಕೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ, ನೈತಿಕತೆ, ಪ್ರಾಮಾಣಿಕತೆ, ಧಾರ್ಮಿಕ ಮತ್ತು ಆಧ್ಯಾತ್ಮಿಕ ಮನೋಭಾವನೆ ಕಲಿಸಬೇಕಿದೆ ಎಂದರು.
ಬಲಿಜ ಸಮಾಜದ ಅಧ್ಯಕ್ಷ ಡಿ.ಶ್ರೀನಿವಾಸ, ಕಾರ್ಯದರ್ಶಿ ಆರ್.ತಿರುಮಲದೇವರಾಯ, ಉಪಾಧ್ಯಕ್ಷರಾದ ಎಂ.ಮಲ್ಲಿಕಾರ್ಜುನ, ಬಿ.ವೆಂಕಟೇಶ, ನಿರ್ದೇಶಕರಾದ ಬಿ.ರಂಗಸ್ವಾಮಿ, ಪದ್ಮಾವತಿ, ಕವಿತಾಳ ವಿದ್ಯಾ, ರಂಗನಾಥ ಇತರರಿದ್ದರು.