ಅಕಾಲಿಕ ಮಳೆಗೆ ಬೆಳೆ, ಜಾನುವಾರು ಹಾನಿ 
ಬಳ್ಳಾರಿ

ಅಕಾಲಿಕ ಮಳೆಗೆ ಬೆಳೆ, ಜಾನುವಾರು ಹಾನಿ

ಪ್ರಮುಖ ಮುಖ್ಯಾಂಶಗಳು

  • ಜಾನುವಾರು
ಬಳ್ಳಾರಿ : ಜಿಲ್ಲೆಯ ವಿವಿಧೆಡೆ ಬಿರುಗಾಳಿ ಸಹಿತ ಬಿದ್ದ ಆಲಿಕಲ್ಲು ಮಳೆಗೆ ಭತ್ತದ ಬೆಳೆ ಹಾನಿಯಾಗಿದೆ. ಜತೆಗೆ ಸಿರಗುಪ್ಪ ತಾಲೂಕಿನಲ್ಲಿ 9 ಕುರಿಗಳು ಸಿಡಿಲು ಬಿದ್ದು ಸತ್ತಿವೆ.
ಕುರುಗೋಡಿನಲ್ಲಿ 24 ಹೆಕ್ಟೇರ್ ಭತ್ತದ ಬೆಳೆಗೆ ಹಾನಿಯಾಗಿದೆ. ಬೆಳೆ ಬಾಗಿದ್ದು, ಕಾಳುಗಳು ಉದುರಿವೆ. ಜಿಲ್ಲೆಯಾದ್ಯಂತ ಆಗಿರುವ ಹಾನಿಯ ನಿಖರ ಮಾಹಿತಿ ತಿಳಿಯಲು ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆಗಳು ಜಂಟಿ ಸರ್ವೆ ಕೈಗೊಳ್ಳಲಾಗಿದೆ.
ಬಳ್ಳಾರಿ ತಾಲೂಕಿನಲ್ಲಿ ಎರಡು ವಿದ್ಯುತ್ ಕಂಬಗಳು ಉರುಳಿದ್ದು, ಅವುಗಳನ್ನು ಬದಲಿಸಿ ಹೊಸ ಕಂಬಗಳನ್ನು ಹಾಕಲಾಗಿದೆ ಎಂದು ಜೆಸ್ಕಾಂ ಇಲಾಖೆಯ ಅಧಿಕಾರಿ ತಿಳಿಸಿದರು.