ಹನುಮಂತಪ್ಪ 
ಬಳ್ಳಾರಿ

ಟ್ರಾೃಕ್ಟರ್‌ಗಳಿಂದ ಬೆಳೆ ಭೂಮಿ ಹಾಳು

ಪ್ರಮುಖ ಮುಖ್ಯಾಂಶಗಳು

  • ರೈತರು ಭೂಮಿ ಸಾಗುವಳಿ

ಬಳ್ಳಾರಿ :

ತಾಲೂಕಿನ ಚರಕುಂಟಿ ಗ್ರಾಮದ ರೈತರ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಕೆಲವರು ದೌರ್ಜನ್ಯ ನಡೆಸಿ, ಬಿತ್ತನೆಗೆ ಸಿದ್ಧಪಡಿಸಿದ್ದ ಜಮೀನನ್ನು ಟ್ರ್ಯಾಕ್ಟರ್‌ಗಳ ಮೂಲಕ ಹಾಳು ಮಾಡಿದ್ದಾರೆ ಎಂದು ರೈತ ಹನುಮಂತಪ್ಪ ಆರೋಪಿಸಿದರು.

ನಗರದ ಪತ್ರಿಕಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಂಜೀವರಾಯನ ಕೋಟೆ ಗ್ರಾಪಂ ವ್ಯಾಪ್ತಿಯ ಸರ್ವೆ ನಂ.46ರಲ್ಲಿರುವ ಒಟ್ಟು 15.50 ಎಕರೆ ಜಮೀನನ್ನು 1985ರಲ್ಲಿ ಅಂದಿನ ಸರ್ಕಾರವು ಹಂಚಿಕೆ ಮಾಡಿತ್ತು.
ಇದರಲ್ಲಿ ಬಡ ರೈತರಿಗೆ ಎಸ್‌ಟಿ ಹಾಗೂ ಒಬಿಸಿ ಸೇರಿದಂತೆ ತಲಾ 1.25 ಎಕರೆ ಪ್ರಮಾಣದಲ್ಲಿ ಜಮೀನು ಹಂಚಿಕೆಯಾಗಿದ್ದು, ಅಂದಿನಿಂದ ಇಂದಿನವರೆಗೆ ರೈತರು ಭೂಮಿಯನ್ನು ಸಾಗುವಳಿ ಮಾಡಲಾಗುತ್ತಿದೆ. ಆದರೆ, 2023ರಲ್ಲಿ ತಮ್ಮ ಗಮನಕ್ಕೆ ಬಾರದಂತೆ ಗೋವರ್ದನ ಎಂಬುವವರ ಹೆಸರಿಗೆ ಪಹಣಿ ತಿದ್ದುಪಡಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿದರು.
ಈ ಕುರಿತು ಆಕ್ಷೇಪ ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ.
ಈ ನಡುವೆ, ಜಮೀನು ತಮ್ಮದೆಂದು ಹೇಳಿಕೊಂಡು ಕೆಲವರು ರೈತರು ಬಿತ್ತನೆಗಾಗಿ ಸಿದ್ಧಪಡಿಸಿದ್ದ ಜಮೀನಿಗೆ ಟ್ರ್ಯಾಕ್ಟರ್‌ಗಳನ್ನು ಬಳಸಿ ಹಾನಿ ಮಾಡಿದ್ದಾರೆ. ಇದರಿಂದ ರೈತರಿಗೆ ನಷ್ಟ ಉಂಟಾಗಿದ್ದು, ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಸದ್ಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ರೈತರ ಜಮೀನು ಮತ್ತು ಬೆಳೆಗಳಿಗೆ ರಕ್ಷಣೆ ಒದಗಿಸಿ, ಪ್ರಕರಣವನ್ನು ಪರಿಶೀಲಿಸಿ ನ್ಯಾಯ ಒದಗಿಸಬೇಕು. ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯಲು ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು. ರೈತರಾದ ಲಕ್ಷ್ಮಮ್ಮ, ಗೌರಮ್ಮ, ಈರಮ್ಮ, ಪಾರ್ವತಿ, ಶೇಕಮ್ಮ, ವೀರಬಸಪ್ಪ, ಹನುಮಂತಪ್ಪ, ಸಂಗಪ್ಪ, ಹೊನ್ನೂರಸ್ವಾಮಿ ಇದ್ದರು.
====