ಸಂಡೂರಿನಲ್ಲಿ ಕರ್ನಾಟಕ ಆದಿಜಾಂಬವ ಮಹಾಸಭಾ ಪದಾಧಿಕಾರಿಗಳ ಸಭೆ ನಡೆಯಿತು. ತಾಲೂಕು ಅಧ್ಯಕ್ಷ ನಿಂಗಪ್ಪ ಐಹೊಳೆ, ಅಂಬೇಡ್ಕರ್ ಸಂಘದ ಅಧ್ಯಕ್ಷ ಎಂ.ಶಿವಲಿಂಗಪ್ಪ, ಡಿಎಸ್‌ಎಸ್ ಮಾಜಿ ಸಂಚಾಲಕ ರಾಮಕೃಷ್ಣ ಹೆಗಡೆ, ಪ್ರಮುಖರಾದ ವೈಟಿಜಿ ಮಲಿಯಪ್ಪ, ಕುಮಾರ್, ಮಲ್ಲೇಶ್ ಕಮ್ಮತ್ತೂರು ಇತರರಿದ್ದರು.
ಸಂಡೂರು: ಉರಿಲಿಂಗ ಪೆದ್ದಿ ಮಠದ ಸ್ವಾಮೀಜಿ ಮಾದಿಗ ಸಮುದಾಯದವರನ್ನು ಟೀಕಿಸಿರುವುದು ಸರಿಯಲ್ಲ ಎಂದು ಕರ್ನಾಟಕ ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ನಿಂಗಪ್ಪ ಐಹೊಳೆ ಹೇಳಿದರು.
ಒಳಮೀಸಲಾತಿ ಜಾರಿಗೆ ಆಗ್ರಹಿಸಿ ಇತ್ತೀಚಿಗೆ ಕರೆ ನೀಡಿದ್ದ ಪಟ್ಟಣ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾನುವಾರ ಮಾತನಾಡಿದರು.
ಇತ್ತೀಚಿಗೆ ಜ್ಞಾನಪ್ರಕಾಶ ಸ್ವಾಮೀಜಿ ನನ್ನ ಬಳಿ ಪೆನ್ ಹಾಗೂ ಖಡ್ಗ ಎಂಬ ಆಯುಧವಿದೆ. ಅಲ್ಲದೆ ಆದನ್ನವಲಂಬಿಸಿರುವ ಆರು ಸಾವಿರ ಜನರಿದ್ದು, ನಿಮ್ಮಂತೆ ಜಗಳ ಕಾಯುವುದಿಲ್ಲ ಎಂದು ಅತಿರೇಕದ ಮಾತುಗಳನ್ನಾಡಿದ್ದಾರೆ.ಮಾದಿಗ ಸಮುದಾಯದಲ್ಲೂ ವಿದ್ಯಾವಂತರು, ಬುದ್ಧಿ ಜೀವಿಗಳಿದ್ದಾರೆ. ಆದರೆ, ಅವರು ಯಾರೂ ನಿಮ್ಮಂತೆ ಮಾತನಾಡುವುದಿಲ್ಲ. ಅಂಬೇಡ್ಕರ್ ಕಲ್ಪಿಸಿಕೊಟ್ಟ ಮೀಸಲಾತಿ ಬೇಕು. ಒಳ ಮೀಸಲಾತಿ ಬೇಡವೆನ್ನುವುದು ಸರಿಯಲ್ಲ ಎಂದು ಟೀಕಿಸಿದರು.
ಪ್ರಮುಖರಾದ ಹೊಸಳ್ಳಿ ತಾಯಪ್ಪ, ಮರಿಸ್ವಾಮಿ, ಕೆ.ದೇವದಾಸ್, ಎಲ್.ಎಚ್.ಶಿವಕುಮಾರ್, ವೈಟಿಜಿ ಮಲಿಯಪ್ಪ, ಕುಮಾರ್, ಮಲ್ಲೇಶ್ ಕಮ್ಮತ್ತೂರು, ರಾಜೇಶ್ ಹೆಗಡೆ, ಗಂಗಪ್ಪ, ನರಸಪ್ಪ ಮುಂತಾದವರಿದ್ದರು.