ಕೊಟ್ಟೂರು ತಾಲೂಕಿನ ಜಾಗಟಗೇರಿ ಗ್ರಾಮದಲ್ಲಿ ಹಸು ಮೂರು ಕರುಗಳಿಗೆ ಜನ್ಮ ನೀಡಿರುವುದು.
- ಕೊಟ್ಟೂರು ಜಾಗಟಗೇರಿ ಮೂರು ಕರುಗಳಿಗೆ ಜನ್ಮ
- ತಾಲೂಕು ಪಶು ವೈದ್ಯಾಧಿಕಾರಿ
ಕೊಟ್ಟೂರು: ತಾಲೂಕಿನ ಜಾಗಟಗೇರಿ ಗ್ರಾಮದಲ್ಲಿ ಮಂಗಳವಾರ ಹಸು ಮೂರು ಕರುಗಳಿಗೆ ಜನ್ಮ ನೀಡಿದೆ.
ಪೂಜಾರ ನಾಗರಾಜ ಅವರ ಐದು ವರ್ಷದ ಹಸು ಏಕಕಾಲಕ್ಕೆ ಹೋರಿ ಕರುಗಳಿಗೆ ಜನ್ಮ ನೀಡಿದೆ. ಮೊದಲ ಬಾರಿ ಈ ಹಸು ಎರಡು ಕರುಗಳಿಗೆ ಜನ್ಮ ನೀಡಿತ್ತು. ಹಸುಗಳು ಸಾಮಾನ್ಯವಾಗಿ ಒಂದು ಕರುವಿಗೆ ಜನ್ಮ ನೀಡುತ್ತವೆ. ಈ ಕುರಿತು ಪ್ರತಿಕ್ರಿಯಿಸಿದ ಪೂಜಾರ ನಾಗರಾಜ, ಮೂರು ಕರುಗಳಿರುವುದರಿಂದ ಹಸುವಿನ ಹಾಲು ಅವುಗಳಿಗೆ ಸಾಲಲ್ಲ. ಹೀಗಾಗಿ ಪಶು ಇಲಾಖೆ ನೆರವು ಕೋರಿರುವುದಾಗಿ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ತಾಲೂಕು ಪಶು ವೈದ್ಯಾಧಿಕಾರಿ ಚಂದ್ರನಾಯ್ಕ, ನಮ್ಮಲ್ಲಿ ಕರುಗಳ ಬೆಳವಣಿಗೆಗೆ ಪೌಷ್ಟಿಕ ಪೌಡರ್ ಇದ್ದು, ಕಳಿಸಿಕೊಡಲಾಗುವುದು ಎಂದರು.