ಕಂಪ್ಲಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಭದ್ರತಾ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಾದ ಸುರೇಶ್ ತಳವಾರ್, ಪ್ರಸಾದ್ ಕೆ.ಗೋಖಲೆ, ಪಿ.ಬಿ.ಪ್ರಕಾಶ್, ಹನುಮನಗೌಡ ಪಾಟೀಲ್, ಬಿ.ಮಲ್ಲಿಕಾರ್ಜುನ ಇತರರು ಪಾಲ್ಗೊಂಡಿದ್ದರು. 
ಬಳ್ಳಾರಿ

ನ್ಯಾಯಾಲಯಕ್ಕೆ ಸೌಲಭ್ಯ-ಭದ್ರತೆ

ಅಶೋಕ್ ಕುಮಾರ್ ಎನ್
ಕಂಪ್ಲಿ: ಪಟ್ಟಣದ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಭಾರ ನ್ಯಾಯಾಧೀಶ ಸಿದ್ಧಲಿಂಗಯ್ಯ ಬಿ.ಗಂಗಾಧರಮಠ ಅಧ್ಯಕ್ಷತೆಯಲ್ಲಿ ಪೊಲೀಸ್, ಅಗ್ನಿಶಾಮಕದಳ, ಆಂತರಿಕ ಭದ್ರತೆ, ಗುಪ್ತಚರ, ಲೋಕೋಪಯೋಗಿ, ಪುರಸಭೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಅಧಿಕಾರಿಗಳೊಂದಿಗೆ ಶುಕ್ರವಾರ ನ್ಯಾಯಾಲಯ ಭದ್ರತೆ ಪರಿಶೀಲನೆ ಸಭೆ ನಡೆಯಿತು.
ಪಟ್ಟಣದ ನ್ಯಾಯಾಲಯಕ್ಕೆ ಮೂಲಸೌಕರ್ಯ ಕಲ್ಪಿಸುವ ಕುರಿತು ಚರ್ಚಿಸಲಾಯಿತು. ನ್ಯಾಯಾಧೀಶರಿಗೆ ಭದ್ರತೆ ಒದಗಿಸುವುದು, ಸಿಸಿ ಕ್ಯಾಮರಾ ಅಳವಡಿಕೆ, ಪೀಠೋಪಕರಣ, ಅಗ್ನಿಶಾಮಕ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು, ನ್ಯಾಯಾಲಯದ ಆವರಣದಲ್ಲಿ ಸ್ವಚ್ಛತೆ ಕಾಪಾಡುವುದು, ನ್ಯಾಯಾಲಯದ ಎದುರು ಇರುವ ಮಕ್ಕಳ ಆಟೋಪಕರಣಗಳನ್ನು ಉದ್ಯಾನದ ಮತ್ತೊಂದೆಡೆ ಸ್ಥಳಾಂತರಿಸುವುದು, ನ್ಯಾಯಾಲಯ ಕಟ್ಟಡದ ದುರಸ್ತಿ, ಕಾಂಪೌಂಡ್ ನಿರ್ಮಿಸುವುದು, ಬೀಟ್ ಮತ್ತು ಭದ್ರತೆಗೆ ಗಾರ್ಡ್ ನೇಮಿಸುವ ಕುರಿತು ಚರ್ಚಿಸಲಾಯಿತು.
ಗುಪ್ತಚರ ವಿಭಾಗದ ಡಿವೈಎಸ್ಪಿ ಸುರೇಶ್ ತಳವಾರ್, ತೋರಣಗಲ್ ಡಿವೈಎಸ್ಪಿ ಪ್ರಸಾದ್ ಕೆ.ಗೋಖಲೆ, ಜಿಲ್ಲಾ ಸಶಸ್ತ್ರ ಮಿಸಲು ಪಡೆಯ ಡಿವೈಎಸ್ಪಿ ಪಿ.ಬಿ.ಪ್ರಕಾಶ, ಪಿಐ ಕೆ.ಬಿ.ವಾಸುಕುಮಾರ್, ಅಗ್ನಿಶಾಮಕದಳ ಜಿಲ್ಲಾ ಅಧಿಕಾರಿ ಹನುಮನಗೌಡ ಪಾಟೀಲ್, ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಲೋಕೋಪಯೋಗಿ ಇಲಾಖೆ ಎಇ ಆನಂದ್ ಪೆಮ್ಮಾರ್, ಆಂತರಿಕ ಭದ್ರತಾ ವಿಭಾಗದ ಹೆಡ್‌ಕಾನ್‌ಸ್ಟೇಬಲ್ ರಾಜಶೇಖರ್ ಇತರರಿದ್ದರು.