ಕಂಪ್ಲಿಯಲ್ಲಿ ಜ.12ರಂದು ನಡೆಯಲಿರುವ ಹಿಂದು ಸಮ್ಮೇಳನದ ಪೂರ್ವಭಾವಿ ಸಭೆಯಲ್ಲಿ ಸಮ್ಮೇಳನ ಸಮಿತಿ ತಾಲೂಕು ಅಧ್ಯಕ್ಷ ಎನ್.ಎಂ.ಪತ್ರೆಯ್ಯಸ್ವಾಮಿ ಮಾತನಾಡಿದರು.  
ಬಳ್ಳಾರಿ

ಸಮ್ಮೇಳನ ಯಶಸ್ಸಿಗೆ ಸಹಕರಿಸಿ

ಕಂಪ್ಲಿ: ಪಟ್ಟಣ ಹಾಗೂ ತಾಲೂಕಿನಲ್ಲಿ ಆಯೋಜಿಸಲಾಗುತ್ತಿರುವ ಹಿಂದು ಸಮ್ಮೇಳನಗಳನ್ನು ಯಶಸ್ವಿಗೊಳಿಸಲು ಸರ್ವ ಸಮುದಾಯದ ಜನರು ಸಹಕಾರ ನೀಡಬೇಕು ಎಂದು ಸಮ್ಮೇಳನ ಸಮಿತಿ ತಾಲೂಕು ಅಧ್ಯಕ್ಷ ಎನ್.ಎಂ.ಪತ್ರೆಯ್ಯಸ್ವಾಮಿ ಕೋರಿದರು.
ಪಟ್ಟಣದಲ್ಲಿ ಪೂರ್ವಭಾವಿ ಸಭೆಯಲ್ಲಿ ಭಾನುವಾರ ಮಾತನಾಡಿ, ಜ.12ರಂದು ಪಟ್ಟಣದಲ್ಲಿ ಸಮ್ಮೇಳನ ನಡೆಯಲಿದ್ದು, ಸರಾಫ್ ವರ್ತಕರು ಮತ್ತು ಕೆಲಸಗಾರರ ಸಂಘದ ಅಧ್ಯಕ್ಷ ರಾಯ್ಕರ್ ಜಗದೀಶ್ ಮಧ್ಯಾಹ್ನದಿಂದ ಅಂಗಡಿ ಬಂದ್ ಮಾಡಿ ಸಮ್ಮೇಳನದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಉಳಿದ ವರ್ತಕರು ಕೂಡ ಅಂಗಡಿಗಳನ್ನು ಬಂದ್ ಮಾಡಿ ಸಮ್ಮೇಳನದಲ್ಲಿ ಪಾಲ್ಗೊಳ್ಳಬೇಕು ಎಂದರು.
ಪದಾಧಿಕಾರಿಗಳಾದ ಎಂ.ಶ್ರೀನಿವಾಸ ಶ್ರೇಷ್ಠಿ, ಕಿಶೋರ್ ರಾಯ್ಕರ್, ಸೂರ್ಯಕಾಂತ್, ಕೃಷ್ಣಪ್ರಸಾದ್, ಪೃಥ್ವಿರಾಜ್, ಸದಾನಂದ್, ಡಿ.ವಿ.ಸತ್ಯನಾರಾಯಣ, ಜಿ.ಶ್ರೀನಿವಾಸ, ವಾಲಿ ಕೊಟ್ರಪ್ಪ, ಅರವಿ ಬಸವನಗೌಡ ಇತರರಿದ್ದರು.