ಆಲೂರು ಗ್ರಾಪಂ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಶನಿವಾರ ಸರಣಿ ಚೆಕ್ ಡ್ಯಾಂ ಮತ್ತು ರಸ್ತೆ ಸೇತುವೆ ನಿರ್ಮಾಣಕ್ಕೆ ಶಾಸಕ ಡಾ.ಎನ್.ಟಿ.ಶ್ರೀನಿವಾಸ ಭೂಮಿ ಪೂಜೆ ನೆರವೇರಿಸಿಸರು. ಪ್ರಮುಖರಾದ ಶಶಿಧರಸ್ವಾಮಿ, ವೆಂಕಟೇಶ, ಶಿವಣ್ಣ, ಪೆನ್ನಪ್ಪ, ನರಸಪ್ಪ, ಮೈಲೇಶ್ ಬೇವೂರ್ ಇತರರಿದ್ದರು. 
ಬಳ್ಳಾರಿ

ಅಂತರ್ಜಲ ವೃದ್ಧಿಗೆ ಸರಣಿ ಚೆಕ್ ಡ್ಯಾಂ ನಿರ್ಮಾಣ

ಕಾನಹೊಸಹಳ್ಳಿ: ಕೂಡ್ಲಿಗಿ ತಾಲೂಕು ಬಯಲುಸೀಮೆ ಬರಪೀಡಿತ ಪ್ರದೇಶವಾಗಿದ್ದು, ವಾರ್ಷಿಕ ಮಳೆ ಪ್ರಮಾಣ ಅತ್ಯಂತ ಕಡಿಮೆಯಿದೆ. ಇದನ್ನು ಮನಗಂಡು ಕ್ಷೇತ್ರದಲ್ಲಿ ನೂರಾರು ಚೆಕ್ ಡ್ಯಾಂಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಶಾಸಕ ಡಾ. ಎನ್.ಟಿ. ಶ್ರೀನಿವಾಸ ಹೇಳಿದರು.
ಆಲೂರು ಗ್ರಾಪಂ ವ್ಯಾಪ್ತಿ ಗ್ರಾಮಗಳಲ್ಲಿ ಶನಿವಾರ ಶಿರಪುರ ಮಾದರಿಯ ಜಲಸಂಗ್ರಹ ಯೋಜನೆಯಡಿ ಸರಣಿ ಚೆಕ್ ಡ್ಯಾಂ ಮತ್ತು ರಸ್ತೆ ಸೇತುವೆ ನಿರ್ಮಾಣಕ್ಕಾಗಿ 17.75 ಕೋಟಿ ರೂ. ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಅಂತರ್ಜಲ ಮಟ್ಟ ಸುಧಾರಣೆ ಆಗಬೇಕಾದರೆ ಚೆಕ್ ಡ್ಯಾಂಗಳನ್ನು ನಿರ್ಮಿಸಬೇಕು ಎಂದು ಸರ್ಕಾರಗಳ ಮೇಲೆ ಒತ್ತಡ ಹೇರಲಾಗಿದೆ. ಇದರ ಫಲವಾಗಿ ಕ್ಷೇತ್ರದಲ್ಲಿ ನೂರಾರು ಚೆಕ್ ಡ್ಯಾಂಗಳು ನಿರ್ಮಾಣಗೊಂಡಿವೆ. ಪರಿಣಾಮವಾಗಿ ಇಂದು ಕೇವಲ 200 ರಿಂದ 300 ಅಡಿ ಆಳದಲ್ಲಿಯೇ ನೀರು ದೊರೆಯುತ್ತಿದ್ದು, ರೈತರಿಗೆ ಸಾಕಷ್ಟು ಅನುಕೂಲವಾಗಿದೆ. ಇಂತಹ ಯೋಜನೆಗಳನ್ನು ಅವಶ್ಯಕತೆ ಇರುವ ಕಡೆಗಳಲ್ಲಿ ಮುಂದುವರಿಸಲಾಗುವುದು ಎಂದರು.
ಚೆಕ್ ಡ್ಯಾಂ ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಹಾಗೂ ಗುಣಮಟ್ಟದೊಂದಿಗೆ ಪೂರ್ಣಗೊಳಿಸಬೇಕು ಎಂದು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ ಶಾಸಕ, ಕಳಪೆ ಕಾಮಗಾರಿ ಕಂಡುಬಂದರೆ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ತಹಸೀಲ್ದಾರ್ ವಿ.ಕೆ. ನೇತ್ರಾವತಿ, ತಾಪಂ ಇಒ ನರಸಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರ್, ಜಿಪಂ ಮಾಜಿ ಸದಸ್ಯ ಕೆ.ಎಂ. ಶಶಿಧರಸ್ವಾಮಿ, ಎಇಇಗಳಾದ ನಾಗನಗೌಡ, ಮಲ್ಲಿಕಾರ್ಜುನ್, ಗುತ್ತಿಗೆದಾರ ವೆಂಕಟೇಶ್, ಇಮಾಮ್ ಸಾಬ್, ಕೆಂಚಮ್ಮನಹಳ್ಳಿ ಶಿವಣ್ಣ, ಪೆನ್ನಪ್ಪ, ಕೋಟೇಶ್ ವೈ.ಜಿ, ಬಸವರಾಜ್, ತಿಪ್ಪೇಶಪ್ಪ, ಪೆನ್ನಪ್ಪ, ಕೆಂಚಮ್ಮನಹಳ್ಳಿ ಓಬಳೇಶ್, ಕರಿಬಸಪ್ಪ, ಭರ್ಮಪ್ಪ, ಬಸವರಾಜ್, ಯಂಬಳಿ ಮಂಜಣ್ಣ, ಕೆ.ಟಿ. ರಾಜಣ್ಣ, ಹರೀಶ್ ಇತರರಿದ್ದರು.