ಬಳ್ಳಾರಿ : ಬ್ಯಾನರ್ ಗಲಾಟೆಯಲ್ಲಿ ಲಿಂಗಾಯತ ಸಮುದಾಯದ ಚಾನಾಳ್ ಶೇಖರ್‌ನನ್ನು ಕೊಲೆ ಮಾಡಿಸಿ ಮಾಜಿ ಸಚಿವ ಬಿ.ಶ್ರೀರಾಮುಲು ಹಾಗೂ ನನ್ನ ವಿರುದ್ಧ ಸಮುದಾಯ ಎತ್ತಿ ಕಟ್ಟಲು ಶಾಸಕ ಭರತ್‌ರೆಡ್ಡಿ ಪಿತೂರಿ ನಡೆಸಿದ್ದರು ಎಂದು ಶಾಸಕ ಜಿ.ಜನಾರ್ದನರೆಡ್ಡಿ ಗಂಭೀರ ಆರೋಪ ಮಾಡಿದರು.
ನಗರದಲ್ಲಿ ಗಲಾಟೆಯಲ್ಲಿ ಖಾಸಗಿ ಅಂಗರಕ್ಷಕನಿಂದ ಉದ್ದೇಶ ಪೂರ್ವಕವಾಗಿ ಯುವಕನ ಕೊಲೆಯಾಗಿದೆ ಎಂಬುದರ ಬಗ್ಗೆ ವಿಡಿಯೋ ಬಿಡುಗಡೆಗೊಳಿಸಿ ಮಾತನಾಡಿದರು. ಗಲಾಟೆಯ ಮೊದಲ ಘಟನೆಯಲ್ಲಿಯೇ ಸತೀಶ್‌ರೆಡ್ಡಿ ಜತೆಗೆ ಬಂದ ವೇಳೆಯೇ ಕೊಲೆ ಮಾಡಬೇಕಿತ್ತು. ಆದರೆ, ಚಾನಾಳ್ ಶೇಖರನ ಆಯಸ್ಸು ಗಟ್ಟಿಯಾಗಿದೆ. ಲಿಂಗಾಯತ ಅಥವಾ ರೆಡ್ಡಿ ಸಮುದಾಯದ ಒಬ್ಬರನ್ನು ಕೊಲೆ ಮಾಡಿಸುವ ಬಗ್ಗೆ ಮೊದಲೇ ಯೋಜನೆ ರೂಪಿಸಿ ಭರತ್‌ರೆಡ್ಡಿ ಹೊಸಪೇಟೆಗೆ ಹೋಗಿದ್ದರು ಎಂದರು.
ಗಲಾಟೆಯಲ್ಲಿ ಖಾಸಗಿ ಅಂಗರಕ್ಷಕನಿಂದ ಮಿಸ್‌ಫೈರ್‌ಯಾಗಿ ಯುವಕ ಮೃತಪಟ್ಟಿಲ್ಲ. ಸ್ವತಃ ಶಾಸಕ ಭರತ್‌ರೆಡ್ಡಿಯೇ ಕಣ್ಣ ಮುಂದೆಯೇ ಉದ್ದೇಶ ಪೂರ್ವಕವಾಗಿಯೇ ಯುವಕನ ಕೊಲೆಯಾಗಿದೆ, ಈ ಪ್ರಕರಣ ನಮ್ಮ ಮೇಲೆ ತಲೆಗೆ ಕಟ್ಟಲು ಹೊರಟಿದ್ದರು. ಈ ಪ್ರಕರಣದಲ್ಲಿ ಸತೀಶ್ ರೆಡ್ಡಿಯನ್ನು ರಕ್ಷಿಸಲು ಹೋಗಿ ಭರತ್‌ರೆಡ್ಡಿಯೇ ಸಿಕ್ಕಿ ಹಾಕಿಕೊಂಡಿದ್ದಾರೆ. ಗಾಂಜಾ ಸೇವಿಸಿದ ಮತ್ತಿನಲ್ಲಿ ಬಳ್ಳಾರಿ ಭಸ್ಮ ಮಾಡುವೆ ಎಂಬುದಾಗಿ ಹೇಳಿದ್ದಾರೆ. ಆದ್ದರಿಂದ, ಕೂಡಲೇ ಭರತ್‌ರೆಡ್ಡಿ, ಪ್ರಮುಖ ಆರೋಪಿ ಸತೀಶ್‌ರೆಡ್ಡಿಯನ್ನು ಬಂಧಿಸಬೇಕು. ಎಎಸ್ಪಿ ರವಿಕುಮಾರ, ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ವಿರುದ್ಧ ದೂರು ನೀಡಿದ್ದು, ಈವರೆಗೆ ಪ್ರಕರಣ ದಾಖಲಾಗಿಲ್ಲ ಎಂದು ಹೇಳಿದರು.
ಅಂಗರಕ್ಷಕರ ಗನ್‌ನಿಂದ ಸಿಡಿದ ಗುಂಡು ಜನಾರ್ದನರೆಡ್ಡಿಯ ದೇಹದ ಯಾವ ಭಾಗಕ್ಕೆ ತಲುಪಿದೆ ಡಿಸಿಎಂ ಡಿ.ಕೆ.ಶಿವಕುಮಾರ ಎಂಬುದಾಗಿ ಹೇಳತ್ತಾರೆ ?. ಜನಾರ್ದನರೆಡ್ಡಿ ಸತ್ತರೆ ಮಾತ್ರ ತನಿಖೆ ನಡೆಸುವುದು ಡಿಕೆಶಿ ಅಪೇಕ್ಷೆಯಾಗಿದಯೇ ?. ಇದು ದುರಹಂಕರದ ಮಾತಾಗಿದೆ. ಇಂತವರು ಸಿಎಂಯಾದರೆ ರಾಜ್ಯದ ಜನ ಭಯಭೀತರಾಗಲಿದ್ದಾರೆ ಎಂದರು.