- ಕಾರ್ಯದರ್ಶಿ
- ಮಧ್ಯಸ್ಥಿಕೆ
- ರಾಜಕಾರಣ
ಬಳ್ಳಾರಿ : ಕಾಂಗ್ರೆಸ್ ಸರ್ಕಾರ ‘ರಿಪ್ಲಬಿಕ್ ಆಫ್ ಬಳ್ಳಾರಿ ’ ಎಂಬುತ್ತಲೇ ರಾಜ್ಯದ ಚುಕ್ಕಾಣಿ ಹಿಡಿದಿತ್ತು. ಸದ್ಯ, ಘಟನೆಯಿಂದಾಗಿ ಬಳ್ಳಾರಿಯಿಂದಲೇ ಕಾಂಗ್ರೆಸ್‌ಗೆ ಪಾಪದ ಕೊಡ ತುಳುಕುವಂತಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ವಾಗ್ದಳಿ ನಡೆಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾಂಗ್ರೆಸ್ ಹೈಕಮಾಂಡ್ ಕೇರಳದಲ್ಲಿದೆ. ಸಿಎಂ ಸಿದ್ದರಾಮಯ್ಯ ಗಾಳಿಪಟ್ಟವಿದ್ದಂತೆ, ಯಾವಾಗ ಅವರ ಬಾಲ ಕಿತ್ತುಕೊಂಡು ಹೋಗುತ್ತದೆ ಗೊತ್ತಿಲ್ಲ. ರಾಜ್ಯದ ಗೃಹಸಚಿವರು ರಬ್ಬರ್ ಸ್ಟಾಂಪ್ ಆಗಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ ಸಿಎಂ ಆಗಬೇಕೆಂಬ ಆಸೆಯಿಂದ ಕುರ್ಚಿಗಾಗಿ ಅಲೆದಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪಾಲಿಕೆಯ ಆಯುಕ್ತರಿಂದ ಹಿಡಿದು ಸರ್ಕಾರದ ಮುಖ್ಯ ಕಾರ್ಯದರ್ಶಿವರೆಗೆ ಏನು ಮಾಡುವುದಕ್ಕೆ ಸಾಧ್ಯ ಎಂದರು.
ಜಿಲ್ಲೆಯಲ್ಲಿ ಮಹರ್ಷಿ ವಾಲ್ಮೀಕಿ ಅವರ ನೆಪವಾಗಿಟ್ಟುಕೊಂಡು ನೆಮ್ಮದಿಯಿಂದ ಶಾಂತಿ ಕದಡಿ ಕಾಂಗ್ರೆಸ್ ಪಾಪದ ಕೆಲಸ ಮಾಡಿದೆ. ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ರಾಜಕಾರಣಕ್ಕೆ ಉಪಯೋಗಿಸಿಕೊಂಡು ರಣರಂಗ ಮಾಡಲು ಉದ್ದೇಶಿಸಿದೆ. ಶಾಸಕ ಭರತ್‌ರೆಡ್ಡಿ, ಅಪ್ತ ಸತೀಶ್ ರೆಡ್ಡಿ ಯಾರವರು?. ದ್ವೇಷದ ರಾಜಕಾರಣದಿಂದ ಕಾಲು ಕೆರೆದುಕೊಂಡು ಬಂದು ಒಂದು ಕುಟುಂಬ ನಾಶ ಮಾಡಲು ಹೊರಟಿದ್ದಿರಿ ಎಂದು ಗುಡುಗಿದರು.
ಘಟನೆಯಲ್ಲಿ ದೇವರಂತೆ ಬಂದ ಮಾಜಿ ಶಾಸಕ ಬಿ.ಶ್ರೀರಾಮುಲು ಅವರ ಮಧ್ಯಸ್ಥಿಕೆ ವಹಿಸಿದ ಹಿನ್ನೆಲೆ ಅನಾಹುತ ತಪ್ಪಿದೆ. ಶಾಸಕ ಜನಾರ್ದನ ರೆಡ್ಡಿ ಅವರನ್ನು ಟಾರ್ಗೆಟ್ ಕಾಂಗ್ರೆಸ್ ಮಾಡಿಕೊಂಡಿದೆ. ತಾಯಿ ಕನಕ ದುರ್ಗಮ್ಮ ಅವರೇ ಉಳಿಸಿದ್ದಾರೆ. ಕೂಡಲೇ ಪ್ರಕರಣದ ಆರೋಪಿಗಳನ್ನು ಬಂಧಿಸಬೇಕು. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಐಪಿಎಲ್ ವಿಜಯೋತ್ಸದ ಕಾಲ್ತುಳಿತ ಸಂಬಂಧ ದಕ್ಷ ಅಧಿಕಾರಿ ದಯಾನಂದ ಅವರನ್ನು ಅಮಾನತುಗೊಳಿಸಿತ್ತು. ಈ ಪ್ರಕರಣದಲ್ಲಿ ಒಬ್ಬ ಎಸ್ಪಿಯನ್ನು ಬಲಿಪಶು ಮಾಡಲಾಗಿದೆ. ಜನಾರ್ದನರೆಡ್ಡಿ ಅವರಿಗೆ ಸೂಕ್ತ ರಕ್ಷಣೆ ರಾಜ್ಯಸರ್ಕಾರ ನೀಡಬೇಕು. ಇಲ್ಲದಿದ್ದರೆ ಕೇಂದ್ರದ ಜತೆ ಚರ್ಚಿಸಿ ಝಡ್ ಪ್ಲಸ್ ಸೆಕ್ಯೂರಿಟಿ ಒದಗಿಸಲಾಗುವುದು ಎಂದರು.