ಅನ್ನಪೂರ್ಣ  
ಬಳ್ಳಾರಿ

ಮೀಸಲಾತಿ ಜಾರಿಗೆ ಕಾಂಗ್ರೆಸ್ ವಿರೋಧವಿಲ್ಲ

ಪ್ರಮುಖ ಮುಖ್ಯಾಂಶಗಳು

  • ಮೀಸಲಾತಿ
ಬಳ್ಳಾರಿ : ಮಹಿಳಾ ಮೀಸಲಾತಿ ಜಾರಿಗೆ ಸದಾ ಬೆಂಬಲವಿದ್ದು, ಕಾಂಗ್ರೆಸ್ ವಿರೋಧಿಸಿಲ್ಲ ಎಂದು ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಮ್ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೀಸಲಾತಿ ಜಾರಿ ವಿಷಯದಲ್ಲಿ ಬಿಜೆಪಿ ರಾಜಕೀಯ ಲಾಭಕ್ಕಾಗಿ ವಿಷಯವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು. ಈ ಹಿಂದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮಹಿಳೆಯರಿಗೆ ಮೀಸಲಾತಿ ಅವಕಾಶ ನೀಡುವ ಉದ್ದೇಶ ವ್ಯಕ್ತಪಡಿಸಿದಾಗ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಇದೀಗ ಅದೇ ವಿಚಾರವನ್ನು ಜಾರಿಗೆ ತರಲು ಮುಂದಾಗಿರುವುದು ರಾಜಕೀಯ ಸ್ವಾರ್ಥದ ಸಂಕೇತ ಎಂದು ಟೀಕಿಸಿದರು.
ಮಹಿಳಾ ಮೀಸಲಾತಿಯನ್ನು ಡಿಲಿಮಿಟೇಷನ್ ಜತೆ ಜೋಡಿಸುವುದು ಏಕೆ ?. ನೇರವಾಗಿಯೇ ಮಹಿಳಾ ಮೀಸಲಾತಿ ಜಾರಿಗೆ ಕಾಂಗ್ರೆಸ್‌ನಿಂದ ಯಾವುದೇ ಅಭ್ಯಂತರವಿಲ್ಲ. ಡಿಲಿಮಿಟೇಷನ್ ಜತೆ ಮಹಿಳಾ ಮೀಸಲಾತಿಯನ್ನು ಜೋಡಿಸಿ ತಮ್ಮ ರಾಜಕೀಯ ಲಾಭ ಪಡೆಯಲು ಬಿಜೆಪಿ ಪ್ರಯತ್ನಿಸುತ್ತಿದೆ. ಇದು ಅತ್ಯಂತ ಕೀಳುಮಟ್ಟದ ರಾಜಕಾರಣವಾಗಿದೆ. ಕಾಂಗ್ರೆಸ್ ಕೇವಲ ಡಿಲಿಮಿಟೇಷನ್‌ಗೆ ಮಾತ್ರ ವಿರೋಧ. ಮಹಿಳಾ ಮೀಸಲಾತಿಗೆ ಸಂಪೂರ್ಣ ಬೆಂಬಲವಿದೆ. ಬಿಜೆಪಿಯೂ ಮಹಿಳಾ ಮೀಸಲಾತಿ ಮತ್ತು ಡಿಲಿಮಿಟೇಷನ್ ಒಟ್ಟಿಗೆ ತರಲು ಯತ್ನಿಸಿದ್ದರಿಂದ ಬಿಲ್ ವಿಫಲವಾಯಿತು ಎಂದು ಸ್ಪಷ್ಟಪಡಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್, ಮಹಿಳಾ ಮುಖಂಡರಾದ ನಾಗಮಣಿ ಜಿಂಗಲ್, ಎಂ.ಎಸ್.ಮಂಜುಳ, ಆಶಾಲತಾ, ಕಮಲ ಮರಿಸ್ವಾಮಿ, ಪದ್ಮ ಇತರರಿದ್ದರು.
===