ಹಗರಿಬೊಮ್ಮನಹಳ್ಳಿಯಲ್ಲಿ ಆರ್ಯವೈಶ್ಯ ಸಮಾಜದಿಂದ ವಾಸವಿ ಪುರಾಣ ಪಾರಾಯಣ ಉದ್ಯಾಪನೆ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಉಡಿ ತುಂಬಲಾಯಿತು. ಆರ್ಯವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಸವಿತಾ ರಮೇಶ, ವಾಸವಿ ವನಿತಾ ಸಂಘದ ಅಧ್ಯಕ್ಷೆ ಲಕ್ಷ್ಮೀ ರಾಘವೆಂದ್ರ, ಪ್ರಮುಖರಾದ ಮಾಧವಿ ಚಿದ್ರಿ, ಜ್ಯೋತಿ ವಿಶ್ವನಾಥ, ಭಾರತಿ ನಾಗೇಂದ್ರ ಕುಮಾರ, ಭಾಗ್ಯ ಸತೀಶ, ರೂಪಾ ರಮೇಶ ಇದ್ದರು.
- ಹಗರಿಬೊಮ್ಮನಹಳ್ಳಿಯಲ್ಲಿ ಆರ್ಯವೈಶ್ಯ ಸಮಾಜದಿಂದ ಆಯೋಜನೆ
- ಶ್ರೀವಾಸವಿ ದೇವಿಗೆ ವಿಶೇಷ ಪೂಜೆ
ಹಗರಿಬೊಮ್ಮನಹಳ್ಳಿಯಲ್ಲಿ ಆರ್ಯವೈಶ್ಯ ಸಮಾಜದಿಂದ ಆಯೋಜನೆ
ಹಗರಿಬೊಮ್ಮನಹಳ್ಳಿ: ಪಟ್ಟಣದ ಶ್ರೀ ಕನ್ಯಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜದಿಂದ ವಾಸವಿ ಪುರಾಣ ಪಾರಾಯಣದ ಉದ್ಯಾಪನೆ, ಹೋಮ ಹಾಗೂ ಉಡಿ ತುಂಬುವ ಕಾರ್ಯಕ್ರಮ ಗುರುವಾರ ನಡೆಯಿತು.
ಶ್ರೀವಾಸವಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಹೋಮ ಮಾಡಲಾಯಿತು. ಬಳಿಕ ಮಹಿಳೆಯರಿಗೆ ಮಡಿಲಕ್ಕಿ ತುಂಬುವ ಶಾಸ್ತ್ರ ನಡೆಯಿತು. ವೇದ ಪಂಡಿತ ವೆಂಕಟೇಶ್ ಕುಲಕರ್ಣಿ ನೇತೃತ್ವದಲ್ಲಿ ಸಹಸ್ರ ನಾಮ ಪಠಣ, ಹೋಮ-ಹವನ ನಡೆಯಿತು. ಆರ್ಯ ವೈಶ್ಯ ಸಂಘದ ಅಧ್ಯಕ್ಷ ಕೋರಗಲ್ ರಾಘವೇಂದ್ರ, ಆರ್ಯ ವೈಶ್ಯ ಮಹಿಳಾ ಮಂಡಳಿ ಅಧ್ಯಕ್ಷೆ ಸವಿತಾ ರಮೇಶ, ವಾಸವಿ ವನಿತಾ ಸಂಘದ ಅಧ್ಯಕ್ಷೆ ಲಕ್ಷ್ಮೀ ರಾಘವೆಂದ್ರ, ಯುವಜನ ಸಂಘದ ರಾಜ್ಯಾಧ್ಯಕ್ಷ ಗಂಗಾವತಿ ಭರತ್, ವಾಸವಿ ಯುವಜನ ಸಂಘದ ಅಧ್ಯಕ್ಷ ರಾಘವೆಂದ್ರ, ಪ್ರಮುಖರಾದ ಮಾಧವಿ ಚಿದ್ರಿ, ಜ್ಯೋತಿ ವಿಶ್ವನಾಥ, ಭಾರತಿ ನಾಗೇಂದ್ರ ಕುಮಾರ, ಭಾಗ್ಯ ಸತೀಶ, ರೂಪಾ ರಮೇಶ, ರೋಜಾ ಭರತ್, ಚಿದ್ರಿ ಪ್ರಶಾಂತಿ, ಅಶೋಕಪ್ಪ, ಮಂಗನಳ್ಳಿ ಸುಬ್ರಮಣ್ಯ ಶೆಟ್ರು, ಗೋಪಾಲ ಶೆಟ್ರು, ಪ್ರಭಾಕರ ಶೆಟ್ರು, ಆಂಜನೇಯ ಶೆಟ್ರು, ನಾಗೇಂದ್ರ ಕುಮಾರ್, ಹೆಗ್ಡಾಳ್ ಶ್ರೀನಿವಾಸ, ಕೋರಗಲ್ ಗಿರೀಶ, ಬನ್ನಿಕಲ್ಲು ವೇಣು, ದೊಡ್ಡಪ್ಪ ಶೆಟ್ರು, ಮಂಗನಳ್ಳಿ ಮೋಹನ್, ಮಾರುತಿ ಶೆಟ್ರು, ಮೋಹನ್‌ಶೆಟ್ರು ಇತರರಿದ್ದರು.