ಬಳ್ಳಾರಿಯ ಡಿಸಿ ಕಚೇರಿ ಆವರಣದಲ್ಲಿ ಮಾಟಸೂಗೂರು ಗ್ರಾಮದಲ್ಲಿ ಬಂದ್ ಮಾಡಿರುವ ಜಮೀನು ರಸ್ತೆಯನ್ನು ಆರಂಭಿಸುವಂತೆ ತಹಸೀಲ್ದಾರ್ ಸಂಗಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು. ಗ್ರಾಮಸ್ಥರಾದ ಕೆ.ಆರ್.ಪಂಪಾಪತಿ, ಆರ್. ಕಳಿಯಪ್ಪ, ಚಂದ್ರಪ್ಪ, ನರಸನಗೌಡ, ಗಾದಿಲಿಂಗಪ್ಪ ಇತರರಿದ್ದರು. 
ಬಳ್ಳಾರಿ

ಬಂದ್‌ಯಾಗಿರುವ ರಸ್ತೆ, ಮರು ಆರಂಭಿಸಿ

ಎಸ್.ಎರ್ರಿಸ್ವಾಮಿ

ಪ್ರಮುಖ ಮುಖ್ಯಾಂಶಗಳು

  • ಆರಂಭಿಸಿ
ಬಳ್ಳಾರಿ : ಸಿರಗುಪ್ಪ ತಾಲೂಕಿನ ಮಾಟಸೂಗುರು ಗ್ರಾಮದಲ್ಲಿ ಜಮೀನುಗಳಿಗೆ ತೆರಳುವ ರಸ್ತೆಯನ್ನು ಕೆಲವರು ಬಂದ್ ಮಾಡಿದ್ದು, ಕೂಡಲೇ ರಸ್ತೆ ಮರು ಆರಂಭಿಸಬೇಕು ಎಂದು ಒತ್ತಾಯಿಸಿ ನಗರದ ಡಿಸಿ ಕಚೇರಿ ಆವರಣದಲ್ಲಿ ಗ್ರಾಮಸ್ಥರು ಪ್ರತಿಭಟಿಸಿ ಮನವಿ ಸಲ್ಲಿಸಿದರು.
ಸಿರಗುಪ್ಪ ತಾಲೂಕಿನ ಮಾಟಸೂಗುರು ಗ್ರಾಮದ ಸರ್ವೇ ನಂ. 151/4 ಕಟ್ಟೆಪ್ಪ, 151/5 ಸಿದ್ದಪ್ಪ, 151/3 ಕೆ.ಮಾಕಪ್ಪ, 151/2 ಮಹೇಶ ಅವರು ಮಾಟಸೂಗೂರು ಗ್ರಾಮದಿಂದ ಗೋಸುಬಾಳು ಹಾಗೂ ಉತ್ತನೂರು ಗ್ರಾಮದಿಂದ ಬೂದುಗುಪ್ಪ ಗ್ರಾಮಕ್ಕೆ ಮತ್ತು ಸಾರ್ವಜನಿಕರು ಜಮೀನುಗಳಿಗೆ ಹೋಗುವ ರಸ್ತೆಯನ್ನು ಬಂದ್ ಮಾಡಿದ್ದಾರೆ. ಪೂರ್ವಜರ ಕಾಲದಿಂದಲೂ ಸರ್ವೇ ನಕ್ಷೆಯಲ್ಲಿ ರಸ್ತೆಯಿದ್ದು, ದುರದ್ದೇಶದಿಂದ ರಸ್ತೆಯನ್ನು ಹಾಳು ಮಾಡಿ ಸಾರ್ವಜನಿಕರ ಆಡಚಣೆ ತೊಂದರೆ ಉಂಟು ಮಾಡಿದ್ದಾರೆ. ಆದ್ದರಿಂದ, ಗ್ರಾಮಸ್ಥರು ಜಮೀನುಗಳಿಗೆ ತೆರಳಲು ಹಾಗೂ ಬೆಳೆದಂತೆ ಫಸಲು ಮನೆಗೆ ತರಲು ರಸ್ತೆಯಿಲ್ಲದೆ ಪರದಾಡಬೇಕಾದ ಅನಿವಾರ್ಯತೆಯಾಗಿದೆ. ಸದ್ಯ, ಪೂರ್ವಜರ ಕಾಲದಿಂದಲೂ ಸರ್ವೇ ನಕ್ಷೆಯಲ್ಲಿ ರಸ್ತೆ ಎಲ್ಲಿರುತ್ತದೆಯೋಅಲ್ಲಿಯೇ ರಸ್ತೆ ಮರು ನಿರ್ಮಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಸಿರಗುಪ್ಪ ತಹಸೀಲ್ದಾರ್ ಗೌಸಿಯಾ ಅವರಿಗೆ ಕಳೆದ ಎರಡು ತಿಂಗಳ ಹಿಂದಯೇ ಮನವಿ ಸಲ್ಲಿಸಿದರೂ ಯಾವುದೇ ಕ್ರಮವಹಿಸಿಲ್ಲ ಎಂದು ಅಕ್ರೋಶ ಹೊರ ಹಾಕಿದರು.