ಬಳ್ಳಾರಿಯ ಅವಂಬಾವಿ ಪ್ರದೇಶದ ಕಾಲುವೆ ಬಳಿ ಗ್ರಾಮೀಣ ವ್ಯಾಪ್ತಿಯ ಸ.ನಂ. 275ರಲ್ಲಿ 1.33 ಎಕರೆ ಅಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ವಶಪಡಿಸಿಕೊಳ್ಳಲಾಯಿತು. ಎಡಿಸಿ ಮಹಮ್ಮದ್ ಎನ್.ಜುಬೇರ್, ತಹಸೀಲ್ದಾರ್ ಟಿ.ರೇಖಾ, ಸಿಬ್ಬಂದಿ ರಾಜಶೇಖರ, ಗಣೇಶ್, ವೀರೇಶ್, ಮಲ್ಲಪ್ಪ ಇದ್ದರು. ===
- ಕಂದಾಯ ಇಲಾಖೆ ಅಧಿಕಾರಿಗಳು ವಶ
- ಜೆಸಿಬಿ ಯಂತ್ರಗಳ ಸಹಾಯದಿಂದ ನೆಲಸಮ
ಬಳ್ಳಾರಿ : ಇಲ್ಲಿನ ಅವಂಬಾವಿ ಪ್ರದೇಶದ ಸಿರಗುಪ್ಪ ರಸ್ತೆಯ ಕಾಲುವೆ ಬಳಿ ಗ್ರಾಮೀಣ ವ್ಯಾಪ್ತಿಯ ಸ.ನಂ. 275ರಲ್ಲಿ 1.33 ಎಕರೆಯನ್ನು ಅಕ್ರಮವಾಗಿ ಒತ್ತುವರಿಯಾಗಿದ್ದ ಸರ್ಕಾರಿ ಜಾಗವನ್ನು ಕಂದಾಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆಯಲಾಯಿತು.
ಇದೇ ವೇಳೆ ಅವಂಬಾವಿ ಪ್ರದೇಶದ ಸಿರಗುಪ್ಪ ರಸ್ತೆಯ ಎಡಬದಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ವಾಣಿಜ್ಯ ಮತ್ತು ಇತರೆ ಕಟ್ಟಡಗಳನ್ನು ಜೆಸಿಬಿ ಯಂತ್ರಗಳ ಸಹಾಯದಿಂದ ನೆಲಸಮಗೊಳಿಸಲಾಯಿತು. ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದ್ದ ಗೋಡೆಗಳು ಹಾಗೂ ಶೆಡ್‌ಗಳನ್ನು ಯಶಸ್ವಿಯಾಗಿ ದ್ವಂಸಗೊಳಿಸಿದರು.