ಸಕಲಾಪುರದಹಟ್ಟಿಯಲ್ಲಿ ಸೋಮವಾರ ಶಾಸಕ ಡಾ.ಎನ್.ಟಿ.ಶ್ರೀನಿವಾಸ್ ಸ್ವಚ್ಛತಾ ಕಾರ್ಯ ಮಾಡಿದರು. ಪ್ರಮುಖರಾದ ಬಸವರಾಜ್, ಮನೋಜ್, ಕೆಇಬಿ ಮಾರಪ್ಪ, ಡಾ.ಓಂಕಾರಪ್ಪ, ತಳವಾರ ಶರಣಪ್ಪ, ತಾಪಂ ಇಒ ನರಸಪ್ಪ, ಬಿಇಒ ಮೈಲೇಶ್ ಬೇವೂರ್, ಜಿಪಂ ಎಇಇ ಮಲ್ಲಿಕಾರ್ಜುನ, ಪ್ರಸನ್ನ ಇದ್ದರು.
ಕಾನಹೊಸಹಳ್ಳಿ: ಸ್ವಚ್ಛತೆ ಕಾರ್ಯವೆಂದರೆ ಸರ್ಕಾರದ ಕೆಲಸ ಎಂದು ಕೂರಬೇಡಿ. ನಮ್ಮ ಮನೆ, ಓಣಿ, ಇಡೀ ಗ್ರಾಮದ ಪರಿಸರವನ್ನು ಸ್ವಚ್ಛವಾಗಿಡುವುದು ನಮ್ಮೆಲ್ಲರ ಹೊಣೆ. ಇದಕ್ಕಾಗಿ ಕಸವನ್ನು ಎಲ್ಲೆಂದರಲ್ಲಿ ಎಸೆಯಬಾರದು ಎಂದು ಶಾಸಕ ಡಾ.ಎನ್. ಟಿ.ಶ್ರೀನಿವಾಸ್ ತಿಳಿಸಿದರು.
ಸಕಲಾಪುರದಹಟ್ಟಿಯಲ್ಲಿ ಸೋಮವಾರ ಮನೆಮನೆಗೆ ಶಾಸಕರು, ಮನೆ ಬಾಗಿಲಿಗೆ ಸರ್ಕಾರ ಕಾರ್ಯಕ್ರಮದ ನಿಮಿತ್ತ ಸ್ವಚ್ಛತಾ ಕಾರ್ಯ ನಡೆಸಿ ಮಾತನಾಡಿದರು. ಶಾಸಕರೇ ಕಸ ಗುಡಿಸುವುದನ್ನು ಕಂಡು ಗ್ರಾಮದ ಜನರು, ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಇಡೀ ಗ್ರಾಮದ ಪರಿಸರವನ್ನು ಸ್ವಚ್ಛಗೊಳಿಸಿದರು.